ಶಾಸಕ ಟಿ.ರಘುಮೂರ್ತಿ ಪುತ್ರಿ ಸುಚಿತ್ರ ವಿವಾಹ: ಪೆಂಡಾಲ್ ಪೂಜೆಯಲ್ಲಿ ಮುಖಂಡರು ಭಾಗಿ

| Published : Oct 10 2024, 02:17 AM IST

ಶಾಸಕ ಟಿ.ರಘುಮೂರ್ತಿ ಪುತ್ರಿ ಸುಚಿತ್ರ ವಿವಾಹ: ಪೆಂಡಾಲ್ ಪೂಜೆಯಲ್ಲಿ ಮುಖಂಡರು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

Suchita marriage of MLA T. Raghumurthy's daughter: Leaders participate in pendal puja

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕರ್ನಾಟಕ ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ವಿಶೇಷ ಪೆಂಡಾಲ್ ಪೂಜೆಯನ್ನು ಅಧಿಕಾರಿಗಳ ಹಾಗೂ ಪಕ್ಷದ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಿದರು.

ಶಾಸಕ ಟಿ.ರಘುಮೂರ್ತಿ ಪತ್ನಿ ಗಾಯಿತ್ರಿ ರಘುಮೂರ್ತಿ ಅವರ ಏಕೈಕ ಸುಪುತ್ರಿ ಸುಚಿತ್ರರವರ ವಿವಾಹ ವರುಣ್‌ ಅವರೊಂದಿಗೆ ಅ.೨೦, ೨೧ ಎರಡು ದಿನಗಳ ಕಾಲ ಇದೇ ಮೈದಾನದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಶಾಲವಾದ ಮೈದಾನದಲ್ಲಿ ಮದುವೆ ಮಂಟಪದ ಅಲಂಕೃತ ಸೆಟ್‌ ಸಿದ್ಧತೆ ಗೊಳಿಸುತ್ತಿದ್ದು, ಪೂಜಾ ಕಾರ್ಯವನ್ನು ನೆರವೇರಿಸಿದರು.

ಡಿವೈಎಸ್ಪಿ ಟಿ.ಬಿ.ರಾಜಣ್ಣ, ಇಒ ಶಶಿಧರ, ಬೆಸ್ಕಾಂ ಅಧಿಕಾರಿ ಜಿ.ಶಿವಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಎಚ್.ಶಶಿಧರ, ಪ್ರಾಂಶುಪಾಲ ಮಂಜುನಾಥ, ಡಾ.ಡಿ.ಎನ್.ಮಂಜುನಾಥ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಶಿವಸ್ವಾಮಿ, ಪುರೋಹಿತ ಕುಮಾರಸ್ವಾಮಿ, ರಾಘು ಉಪಸ್ಥಿತರಿದ್ದರು.

-----

ಪೋಟೋ: ೯ಸಿಎಲ್‌ಕೆ೨

ಚಳ್ಳಕೆರೆ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಪೆಂಡಾಲ್ ಪೂಜೆಯನ್ನು ಶಾಸಕ ಟಿ.ರಘುಮೂರ್ತಿ ನೆರವೇರಿಸಿದರು.