: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಆಯೋಜಿಸುತ್ತಿರುವ ‘ಜಲ ಸಂರಕ್ಷಣಾ ಅಭಿಯಾನ’ದ ಪೋಸ್ಟರ್‌ನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಬಿಡುಗಡೆಗೊಳಿಸಿದರು.

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಆಯೋಜಿಸುತ್ತಿರುವ ‘ಜಲ ಸಂರಕ್ಷಣಾ ಅಭಿಯಾನ’ದ ಪೋಸ್ಟರ್‌ನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ರೆಡ್ಡಿ, ಎಲ್ ನಿನೋ ಪರಿಣಾಮದಿಂದ ಈ ವರ್ಷ ದೇಶದ ಹಲವೆಡೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ನೀರಿನ ಮಹತ್ವ ಅರಿತು ಅದನ್ನು ಸಂರಕ್ಷಿಸುವ ಜವಾಬ್ದಾರಿ ವಹಿಸಬೇಕು ಎಂದರು.

ಕೆಆರ್‌ಎಂಎಸ್‌ಎಸ್‌ ರಾಜ್ಯ ಜಂಟಿ ಕಾರ್ಯದರ್ಶಿ ಡಾ.ಮಾಧವ ಎಂ.ಕೆ., ಆಕಾಶವಾಣಿಯ ಚಂದ್ರಶೇಖರ್ ಶೆಟ್ಟಿ, ಕೆಆರ್‌ಎಂಎಸ್‌ಎಸ್‌ ರಾಜ್ಯ ಮಾಧ್ಯಮ ಪ್ರಮುಖ್ ಮಮತಾ ಶೆಟ್ಟಿ, ಮಂಗಳೂರು ವಿಭಾಗದ ನಿಕಟ ಪೂರ್ವಾಧ್ಯಕ್ಷೆ ಡಾ. ಸುಧಾ ಎನ್.ವೈದ್ಯ, ಕಾರ್ಯದರ್ಶಿ ರಾಜೇಶ್ ಕುಮಾರ್, ಕೋಶಾಧಿಕಾರಿ ಗೀತಾ ಜೈನ್, ಮಾಧ್ಯಮ ಪ್ರಮುಖ್ ಪ್ರಿಯಾ ಭಟ್ ಇದ್ದರು.