ಸಾರಾಂಶ
ತಾಲೂಕಿನ ಮೇಗಳಪಾಳ್ಯ ಗ್ರಾಮ ತಾಂಡದಲ್ಲಿ ಮೈಕ್ರೋ ಪೈನಾನ್ಸ್ ಕಂಪನಿಗಳಿಂದ ಸಾಲ ಮಾಡಿದ್ದ ರೈತನೋರ್ವ ಕಿರುಸಾಲ ಕಂಪನಿಗಳ ಕಾಟಕ್ಕೆ ಹೆದರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದ
ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ಮೇಗಳಪಾಳ್ಯ ಗ್ರಾಮ ತಾಂಡದಲ್ಲಿ ಮೈಕ್ರೋ ಪೈನಾನ್ಸ್ ಕಂಪನಿಗಳಿಂದ ಸಾಲ ಮಾಡಿದ್ದ ರೈತನೋರ್ವ ಕಿರುಸಾಲ ಕಂಪನಿಗಳ ಕಾಟಕ್ಕೆ ಹೆದರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದ. ಈ ಘಟನೆ ಕುರಿತು ಮೇ 30 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ "ಮೈಕ್ರೋ ಪೈನಾನ್ಸ್ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ " ಎಂಬ ಶೀರ್ಷಿಕೆಯಡಿ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯಿಂದ ಎಚ್ಚೆತ್ತ ತಹಸೀಲ್ದಾರ್ ಸಂತೋಷ್‌ಕುಮಾರ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಕುಟುಂಬಸ್ಥರಿಂದ ಮಾಹಿತಿ ಪಡೆದರು.
ಮೇಗಳ ಪಾಳ್ಯ ತಾಂಡದ ರೈತ ಸ್ವಾಮಿನಾಯ್ಕ (೪೦) ಇತ್ತೀಚಿಗೆ ದಾಬಸ್ ಪೇಟೆ ಸಮೀಪದ ಬಿಲ್ಲಿನಕೋಟೆ ನೇಣಿಗೆ ಶರಣಾಗಿದ್ದರು. ಮೃತನ ವಾರಸುದಾರರೊಬ್ಬರು ನೀಡಿದ ದೂರಿನ ಮೇರೆಗೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃಷಿ ಇಲಾಖೆಯ ಎಡಿಎ ಅಜಯ್‌ಕುಮಾರ್ ಹಾಗೂ ಕಂದಾಯ ನಿರೀಕ್ಷಕ ಕಿರಣ್ ಕುಟುಂಬಸ್ಥರಿಂದ ಮಾಹಿತಿ ಪಡೆದರು.