ಪಿಎಂ ವಿಶ್ವಕರ್ಮ ಯೋಜನೆ ಸದುಪಯೋಗ ಪಡೆದುಕೊಳ್ಳಿ

| Published : Sep 21 2024, 01:45 AM IST

ಸಾರಾಂಶ

ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಿಕೊಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು.

ಕನ್ನಡಪ್ರಭ ವಾರ್ತೆ ನಂಜನಗೂಡುಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಕುಶಲಕರ್ಮಿಗಳಿಗೆ ಮೂಲ ತರಬೇತಿ ನೀಡಿ ಕೌಶಲ್ಯ ವೃದ್ದಿಸುವ ಜೊತೆಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಸ್ವಯಂ ಉದ್ಯೋಗ ಸ್ಥಾಪಿಸಿಕೊಳ್ಳಲು ನೆರವಾಗುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿರಿ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ತರಬೇತಿ ಸಂಸ್ಥೆಯ ಮುಖ್ಯಸ್ಥೆ ಸುಜಾತ ಹೇಳಿದರು.ಪಟ್ಟಣದ 9ನೇ ತಿರುವಿನಲ್ಲಿರುವ ವಿಶ್ವಕರ್ಮ ತರಬೇತಿ ಸಂಸ್ಥೆಯಲ್ಲಿ ಪ್ರಧಾನಿ ಮೋದಿ ಅವರ ವಿಶ್ವಕರ್ಮ ಯೋಜನೆಯ ವಾರ್ಷಿಕ ಮಹೋತ್ಸವ ಕಾರ್ಯಕ್ರಮವನ್ನು ಎಲ್.ಇಡಿ ಪರದೆ ಮೂಲಕ ವೀಕ್ಷಣೆ ನಡೆಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಿ ಅವರು ಮಾತನಾಡಿದರು.ಈ ಯೋಜನೆಯ ಮೂಲಕ ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಿಕೊಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಈ ನಿಟ್ಟಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಜಾರಿ ಮೂಲಕ ತರಬೇತಿ ಭತ್ಯೆಯೊಂದಿಗೆ ಕೌಶಲ್ಯ ತರಬೇತಿ ನೀಡಿ ಕೌಶಲ್ಯವನ್ನು ವೃದ್ದಿಪಡಿಸಿ ಅವರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಸಾಲ ಸೌಲಭ್ಯ ಮತ್ತು ಟೋಲ್ ಕಿಟ್ ಕೂಡ ಒದಗಿಸಲಾಗುತ್ತಿದೆ ಎಂದರು.ಈ ಯೋಜನೆಯು 18 ಬಗೆಯ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ನೆರವು ನೀಡಲಾಗುತ್ತಿದೆ. ಅಲ್ಲದೆ ಬಡವರಿಗೆ ಈ ಯೋಜನೆ ಒಂದು ವರದಾನವಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.ಮೋಸಾಯಿಕ್ ವರ್ಕ್ ಸ್ಕಿಲ್ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್, ತರಬೇತಿ ಪಡೆದ ಕೆ.ಆರ್. ನಗರದ ಹೂ ಮಾರುವ ಮಹಿಳೆ ಶೋಭಾ ಮಾತನಾಡಿದರು.ಪಿಎಂ ವಿಶ್ವಕರ್ಮ ಯೋಜನೆಗೆ ಒಂದು ವರ್ಷ ತುಂಬಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹರಾಷ್ಟ್ರದ ವಾಧ್ರದಲ್ಲಿ ನಡೆದ ಕಾರ್ಯಕ್ರಮವನ್ನು ಎಲ್.ಇಡಿ ಪರದೆ ಮೂಲಕ ವೀಕ್ಷಣೆ ಮಾಡಲಾಯಿತು. ನಂತರ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ಮತ್ತು ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು.ಕೆನರಾ ಬ್ಯಾಂಕ್ ವ್ಯವಸ್ಥಾಪಕ ಆಶೀಶ್ ಶುಕ್ಲ, ಐಸಿಐಸಿ ಬ್ಯಾಂಕ್ ವ್ಯವಸ್ಥಾಪಕಿ ಕವಿತ, ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕಿ ರೇಣುಕಾ, ನಗರಸಭೆ ಅಧಿಕಾರಿ ಮೊಹಮದ್ ಶಫಿ, ಮೊಸಾಯಿಕ್ ವರ್ಕ್ ಸ್ಕಿಲ್ ಸಂಸ್ಥೆಯ ಸುಮಾ, ಪವಿತ್ರ, ಸ್ನೇಹ, ವಿಜಯಲಕ್ಷ್ಮಿ, ಉಮಾ ಇದ್ದರು. --------------