ಸಾರಾಂಶ
6 ದಿನಗಳ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಅಂಕಗಳು ಮುಖ್ಯವಾದ್ದರಿಂದ ಶಿಕ್ಷಕರ, ಪೋಷಕರ ಒತ್ತಡದ ನಡುವೆ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸಂಪೂರ್ಣ ಕಳೆಯುತ್ತಾರೆ, ಆಟ, ಓಟ ಅಥವಾ ಇತರೆ ಚಟುವಟಿಕೆಗೆ ಸಮಯದ ಅಭಾವ. ಆದ್ದರಿಂದ ಬೇಸಿಗೆ ಶಿಬಿರದಲ್ಲಿ ಮಕ್ಕಳ ಪ್ರತಿಭೆಯ ಅನಾವರಣ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉತ್ತಮ ವೇದಿಕೆಯಾಗಿದೆ ಎಂದು ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸೋಷಿಯಲ್ ಕ್ಲಬ್ ಆವಣದಲ್ಲಿ ತಾಲೂಕು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯಿಂದ ಆಯೋಜನೆ ಮಾಡಿದ್ದ 6 ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂತಹ ಅಮೂಲ್ಯ ಅವಕಾಶದ ಬಗ್ಗೆ ಪೋಷಕರು ತಿಳಿದು, ಮಕ್ಕಳು ಬೇಸಿಗೆ ಶಿಬಿರಕ್ಕೆ ತೆರಳಲು ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.ವಕೀಲ ಆರ್.ಡಿ.ರವೀಶ್ ಮಾತನಾಡಿ, ‘ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಯೋಗಾಸನ, ಶ್ಲೋಕಗಳ ಕಲಿಕೆ, ಹಲವಾರು ಆಟಗಳು, ಚಿತ್ರಗೀತೆಗಳ ಗಾಯನ ಹಾಗೂ ನೃತ್ಯ ಹೇಳಿಕೊಟ್ಟಿದ್ದಾರೆ. ಇಲ್ಲಿ ಕಲಿತ ವಿದ್ಯೆಯನ್ನು ನಿಮ್ಮ ಶಾಲೆಗಳಲ್ಲಿ ಪ್ರದರ್ಶನ ನೀಡಿದಾಗ ನಿಮಗೆ ಪ್ರೋತ್ಸಾಹ ಹಾಗೂ ಉತ್ತಮ ವಿದ್ಯಾರ್ಥಿ ಎಂಬ ಕೀರ್ತಿ ನಿಮಗೆ ದೊರೆಯುತ್ತೆ. ಆದ್ದರಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುವ ಅಭ್ಯಾಸವನ್ನು ರೂಢಿಸಿಕೊಂಡಲ್ಲಿ ಉನ್ನತ್ತ ಶಿಕ್ಷಣ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಕುಮುದಾ ಮಾತನಾಡಿದರು. ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ತಾ. ಅಧ್ಯಕ್ಷ ಶಂಕರನಾರಾಯಣ ಐತಾಳ್, ರಾಮದಾಸ್, ರೇಣುಕೇಶ್ ಹಾಗೂ ಪುರಸಭೆ ಮಾಜಿ ಉಪಾಧ್ಯಕ್ಷೆ ತ್ರಿಲೋಚನಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಿಬಿರಾರ್ಥಿಗಳು ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಏಕಪಾತ್ರಾಭಿನಯ ನಡೆಸಿಕೊಟ್ಟರು.ಮುರಳೀಧರ ಗುಪ್ತಾ, ಅಶೋಕ್, ಮಂಜುಳಾ ರವೀಶ್, ನವಿತಾ, ಇತರರು ಇದ್ದರು.
ಹೊಳೆನರಸೀಪುರ ಪಟ್ಟಣದ ಸೋಷಿಯಲ್ ಕ್ಲಬ್ ಆವಣದಲ್ಲಿಆಯೋಜಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಸಂಭ್ರಮಿಸಿದರು.