ಸುನಿತಾ ವಿಲಿಯಮ್ಸ್‌ ಸುರಕ್ಷಿತ: ಮಾಜಿ ಇಸ್ರೋ ಅಧ್ಯಕ್ಷ

| Published : Nov 17 2024, 01:16 AM IST

ಸುನಿತಾ ವಿಲಿಯಮ್ಸ್‌ ಸುರಕ್ಷಿತ: ಮಾಜಿ ಇಸ್ರೋ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಗಗನಯಾನಿ ಸುನಿತಾ ವಿಲಿಯಂ ಅವರ ವಾಹನ ತೊಂದರೆಗೊಳಗಾಗಿದ್ದು ಅವರಿಗೆ ಯಾವುದೇ ತೊಂದರೆ ಇಲ್ಲ. ಬಾಹ್ಯಾಕಾಶ ನಿಲ್ದಾಣದಲ್ಲಿ ಸುರಕ್ಷಿತವಾಗಿದ್ದು ಮುಂದಿನ ದಿನಗಳಲ್ಲಿ ವಾಪಸ್ ಬರಲಿದ್ದಾರೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು. ಕುಣಿಗಲ್‌ನಲ್ಲಿ ಆಯೋಜಿಸಿದ್ದ ವಿಜ್ಞಾನೋತ್ಸವದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಗಗನಯಾನಿ ಸುನಿತಾ ವಿಲಿಯಂ ಅವರ ವಾಹನ ತೊಂದರೆಗೊಳಗಾಗಿದ್ದು ಅವರಿಗೆ ಯಾವುದೇ ತೊಂದರೆ ಇಲ್ಲ. ಬಾಹ್ಯಾಕಾಶ ನಿಲ್ದಾಣದಲ್ಲಿ ಸುರಕ್ಷಿತವಾಗಿದ್ದು ಮುಂದಿನ ದಿನಗಳಲ್ಲಿ ವಾಪಸ್ ಬರಲಿದ್ದಾರೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು. ಕುಣಿಗಲ್ ಪಟ್ಟಣದ ಸರ್ವೋದಯ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನೋತ್ಸವ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಾತನಾಡಿದರು.ಮಕ್ಕಳು ಹುಟ್ಟಿ ಬೆಳೆಯುವ ಸಂದರ್ಭದಲ್ಲಿ ಹಿರಿಯರಿಗೆ ಮತ್ತು ಪೋಷಕರಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ ವಿಚಾರ ತಿಳಿಯದ ಕೆಲವರು ಮಕ್ಕಳ ಪ್ರಶ್ನೆ ಕೇಳುವ ಹಕ್ಕನ್ನು ಮೊಟುಕುಗೊಳಿಸುವುದು ಸಾಮಾನ್ಯ ವಿಚಾರ ಆಗಿದ್ದರೂ ಕೂಡ ಅವರ ಬೆಳವಣಿಗೆ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತವೆ ಅದಕ್ಕಾಗಿ ವಿಚಾರವನ್ನ ಸಮಯ ತೆಗೆದುಕೊಂಡಾದರೂ ತಿಳಿಸುವ ಪ್ರಯತ್ನ ಆಗಬೇಕು ಎಂದರು. ಭವಿಷ್ಯದ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪನೆ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದು ಮುಂದಿನ ಕೆಲವೇ ವರ್ಷಗಳಲ್ಲಿ ಆ ಕಾರ್ಯ ಪ್ರಾರಂಭವಾಗಲಿದೆ ಎಂದರು.ಶಾಲೆಯ ಸಾವಿರಾರು ವಿದ್ಯಾರ್ಥಿಗಳು ವಿಜ್ಞಾನ, ಶಿಕ್ಷಣ ಸಂಸ್ಕೃತಿ, ಅರಣ್ಯ ಸೇರಿದಂತೆ ಹಲವಾರು ವಿವಿಧ ಮಾದರಿಗಳನ್ನು ತಯಾರಿಸಿ ವಸ್ತು ಪ್ರದರ್ಶನಾಲಯ ಏರ್ಪಡಿಸಿದ್ದರು.ಶಾಲೆಯ ಅಧ್ಯಕ್ಷರಾದ ನಾಗರಾಜ್, ಕಾರ್ಯದರ್ಶಿ ಡಾಕ್ಟರ್ ನಿಖಿಲ್ ಸೇರಿದಂತೆ ಹಲವಾರು ಗಣ್ಯರು ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.