ಕೆಪಿಸಿಸಿಯ ರಾಜ್ಯ ಸಂಚಾಲಕಿ ಅಥಣಿಯ ಸುನಿತಾ ಐಹೊಳೆ ಇವರನ್ನು ಬೆಳಗಾವಿಯ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಸಹಕಾರ ಇಲಾಖೆಯ ವಿಶೇಷ ಕರ್ತವ್ಯ ಅಧಿಕಾರಿ ಹಾಗೂ ಸರ್ಕಾರದ ಪದ ನಿಮಿತ್ತ ಜಂಟಿ ಕಾರ್ಯದರ್ಶಿ ಎ.ಸಿ.ದಿವಾಕರ ನೇಮಕ ಮಾಡಿ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಡಿಸಿಸಿ ಬ್ಯಾಂಕ್‌ ಆಯ್ಕೆಯಾದ ಸುನಿತಾ ಐಹೊಳೆಯವರನ್ನು ಪುರಸಭೆಯ ಸದಸ್ಯ ರಾವಸಾಹೇಬ ಐಹೊಳೆ, ಕಾಂಗ್ರೆಸ್ ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಕಾಂಗ್ರೆಸ್ ಮುಖಂಡ ಸಂಜೀವ ಕಾಂಬಳೆ ಸೇರಿದಂತೆ ಅನೇಕರು ಸನ್ಮಾನಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ನನ್ನನ್ನು ಗುರುತಿಸಿ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ ನೇಮಕ ಮಾಡಿದ್ದು ಸಂತೋಷ ತಂದಿದೆ. ನನ್ನ ನೇಮಕಕ್ಕೆ ಕಾರಣರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೇರಿ ಮುಖಂಡರನ್ನು ಅಭಿನಂದಿಸುವೆ.

-ಸುನಿತಾ ಐಹೊಳೆ, ಕೆಪಿಸಿಸಿಯ ರಾಜ್ಯ ಸಂಚಾಲಕಿ