ಸಾರಾಂಶ
ಗರಗಂದೂರು ಮೊರಾರ್ಜಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸುಂಟಿಕೊಪ್ಪ ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬುಧವಾರ ಗಾಂಧಿ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗರಗಂದೂರು ಮೊರಾರ್ಜಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸುಂಟಿಕೊಪ್ಪ ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬುಧವಾರ ಗಾಂಧಿ ಜಯಂತಿ ಆಚರಿಸಲಾಯಿತು.ಗರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಾಜಿ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿಯ ಅಂಗವಾಗಿ 25ಕ್ಕೂ ಮಿಕ್ಕಿ ಹಣ್ಣಿನ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಅಲ್ಲಿನ ವಿದ್ಯಾರ್ಥಿಗಳಿಗೆ ದತ್ತು ನೀಡಲಾಯಿತು.
1934ರಲ್ಲಿ ಮಹಾತ್ಮಾ ಗಾಂದೀಜಿ ಕೊಡಗು ಜಿಲ್ಲೆಗೆ ಬಂದು ಗುಂಡುಗುಟ್ಟಿಯ ಮಂಜನಾಥಯ್ಯನವರ ಬಂಗಲೆಗೆ ಆಗಮಿಸಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು. ಅವರು ಬಂದು ತಂಗಿ ಹೋದ ಸವಿನೆನಪಿಗಾಗಿ ಆ ತೋಟದ ಮಾಲೀಕ ಮುಕುಲ್ ಮಹೀಂದ್ರ ಅವರೊಂದಿಗೆ ಒಂದು ಟ್ರಸ್ಟ್ ರಚಿಸಿದ್ದು ಆ ಟ್ರಸ್ಟ್ ಮೂಲಕ ಪ್ರತೀ ವರ್ಷ ಗಾಂಧಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡೆನಿಸ್ ಡಿಸೋಜ ಹೇಳಿದರು.ಟ್ರಸ್ಟ್ ಸಂಚಾಲಕ ಎಂ.ಇ. ಮೊಹಿದ್ದೀನ್ ಮಾತನಾಡಿ, ಪರಿಸರದ ಬಗ್ಗೆ ನಾವು ಬಹಳ ಜವಾಬ್ದಾರಿ ಹೊಂದಬೇಕು ಎಂದರಲ್ಲದೆ, ಮರಗಳನ್ನು ಬೆಳೆಸುವುದರಿಂದ ನಾವು ನಿಸರ್ಗಕ್ಕೆ ಕೊಡಬಹುದಾದ ಮೌಲ್ಯದ ಬಗ್ಗೆ ವಿವರಿಸಿದರು.
ಟ್ರಸ್ಟಿಗಳಾದ ರಮೇಶ್ ಆರ್. ಪಿಳ್ಳೆ, ಮೊರಾರ್ಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಚಂದ್ರಶೇಖರ್ ಮತ್ತಿತರರಿದ್ದರು.