ಸುಂಟಿಕೊಪ್ಪ: ಶಾಲೆಗಳ ಪ್ರಾರಂಭೋತ್ಸವ ಸಂಭ್ರಮ

| Published : Jun 01 2024, 12:47 AM IST

ಸುಂಟಿಕೊಪ್ಪ: ಶಾಲೆಗಳ ಪ್ರಾರಂಭೋತ್ಸವ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸಂತ ಮೇರಿ ಆಂಗ್ಲಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶುಕ್ರವಾರ ಹಬ್ಬದ ವಾತವರಣ ಕಂಡು ಬಂತು. ಎರಡು ತಿಂಗಳ ಬರೋಬ್ಬರಿ ರಜೆ ಮುಗಿಸಿ ಮರಳಿ ಶಾಲೆಗೆ ಹೋಗುವ ದಿನದಂದು ಮಕ್ಕಳು ಮತ್ತೆ ವಿದ್ಯಾದೇಗುಲಕ್ಕೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸುಂಟಿಕೊಪ್ಪ ವ್ಯಾಪ್ತಿಯ ಶಾಲೆಗಳಲ್ಲಿ ಬಾಳೆ ಗಿಡ, ತಳಿರು ತೋರಣ ಕಟ್ಟಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶಿಕ್ಷಕರು ಅದ್ಧೂರಿ ಸ್ವಾಗತ ಕೋರಿದರು.

ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸಂತ ಮೇರಿ ಆಂಗ್ಲಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶುಕ್ರವಾರ ಹಬ್ಬದ ವಾತವರಣ ಕಂಡು ಬಂತು. ಎರಡು ತಿಂಗಳ ಬರೋಬ್ಬರಿ ರಜೆ ಮುಗಿಸಿ ಮರಳಿ ಶಾಲೆಗೆ ಹೋಗುವ ದಿನದಂದು ಮಕ್ಕಳು ಮತ್ತೆ ವಿದ್ಯಾದೇಗುಲಕ್ಕೆ ಆಗಮಿಸಿದರು.

ಕಿರಿಯ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳ ಮಕ್ಕಳು ಅಳುತ್ತ ತರಗತಿಗಳಿಗೆ ತೆರಳುತ್ತಿದ್ದುದು ಕಂಡು ಬಂತು. ಕೆಲವು ಶಾಲೆಗಳಲ್ಲಿ ಪೋಷಕರು ಮಕ್ಕಳನ್ನು ಶಾಲಾ ಗೇಟ್ ಬಳಿ ಶಿಕ್ಷಕರು ಅಥವಾ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಿ ಹೋಗುವಂತೆ ಸೂಚಿಸಲಾಗಿತ್ತು.

ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಮೇ.೨೮ ರಂದು ಶಾಲೆಗಳನ್ನು ತೆರೆದು ಮೇ ೩೧ ರಂದು ಮಕ್ಕಳಿಗೆ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವ ಮಾಡುವಂತೆ ಆದೇಶಿಸಲಾಗಿತ್ತು. ಇದೀಗ ಪ್ರಾಥಮಿಕ ಪ್ರೌಢಶಾಲಾ ಮತ್ತೊಂದು ವರ್ಷದ ಶೈಕ್ಷಣಿಕ ಸಾಧನೆಗಾಗಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸೇಲ್ವರಾಜ್, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ವೀರಾ ಡಿಸೋಜ, ಹಾಗೂ ಗದ್ದೆಹಳ್ಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಾಕುಮಾರಿ ಇತರ ಶಾಲೆಗಳ ಸಹ ಶಿಕ್ಷಕರು ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಬರಮಾಡಿಕೊಂಡರು.

ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೇ.೭೫ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯ ಸೇಲ್ವರಾಜ್ ತಿಳಿಸಿದರು.

ಸುಂಟಿಕೊಪ್ಪ ಪ್ರೌಢಶಾಲೆಯ ಹಾಜರಾತಿಯ ಅರ್ಧಬಾಗದಷ್ಟು ಮಂದಿ ಶಾಲೆಗೆ ಆಗಮಿಸುವ ಶಾಲೆಯ ಆರಂಭೋತ್ಸವದ ಸಡಗರದಲ್ಲಿ ತೊಡಗಿಸಿಕೊಂಡಿದ್ದರು.