ಸಾರಾಂಶ
ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಪೂಜಾ ವಿಧಿ ವಿಧಾನದೊಂದಿಗೆ ಚೋರನಹೊಳೆಯಲ್ಲಿ ವಿಸರ್ಜಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಐಗೂರಿನ ಏಕದಂತ ಗೆಳೆಯರ ಬಳಗದ ವತಿಯಿಂದ ಅದ್ಧೂರಿಯಾಗಿ ಆಚರಿಸಿದ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಪೂಜಾ ವಿಧಿ ವಿಧಾನದೊಂದಿಗೆ ಚೋರನ ಹೊಳೆಯಲ್ಲಿ ವಿಸರ್ಜಿಸಲಾಯಿತು.29 ರಂದು ಸಂಜೆ ಶ್ರೀ ಗೌರಿ ಗಣೇಶ ವಿಗ್ರಹ ಮೂರ್ತಿಯನ್ನು ಸರ್ವ ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ಉತ್ಸವ ಸಮಿತಿ ವತಿಯಿಂದ ಭವ್ಯವಾಹನ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ಪಟಾಕಿ ಸಿಡಿಸಿ ಭಕ್ತಾದಿಗಳು ರಾತ್ರಿ ವೇಳೆ ಚೋರನ ಹೊಳೆಯಲ್ಲಿ ವಿಗ್ರಹ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಈ ಸಂದರ್ಭ ಏಕದಂತ ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷ ಯತೀಶ್ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷರಾದ ಅನುಕುಮಾರ್, ಕಾರ್ಯದರ್ಶಿ ಯಶೀತ್, ಖಜಾಂಜಿ ನರಸಿಂಹ, ಪದಾಧಿಕಾರಿಗಳಾದ ಬಿ.ಅಭಿಜಿತ್, ಬಿ.ದರ್ಶಿತ್, ಮಣಿಕಂಠ, ಸಲಹೆಗಾರರಾದ ಮದನ್, ಆನಂದ, ವಿಶ್ವ ಪೂಜಾರಿ ಹಾಗೂ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))