7ರಂದು ಸುಂಟಿಕೊಪ್ಪ ಗ್ರಾಮ ದೇವರ ವಾರ್ಷಿಕೋತ್ಸವ

| Published : Mar 04 2025, 12:32 AM IST

ಸಾರಾಂಶ

ಸುಂಟಿಕೊಪ್ಪ ಗ್ರಾಮ ದೇವರ 6ನೇ ವರ್ಷದ ವಾರ್ಷಿಕ ಪೂಜೆಯು ಮಾ. 7ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗ್ರಾಮ ದೇವರ 6ನೇ ವರ್ಷದ ವಾರ್ಷಿಕ ಪೂಜೆಯು ಮಾ. 7 ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಪಟ್ಟಣದ 2 ನೇ ವಿಭಾಗದಲ್ಲಿರುವ ಗ್ರಾಮದೇವರ ಬನದಲ್ಲಿ 6ನೇ ವರ್ಷದ ವಾರ್ಷಿಕ ಮಹೋತ್ಸವದ ಅಂಗವಾಗಿ ಸುಂಟಿಕೊಪ್ಪದ ವಿವಿಧ ದೇವಾಲಯಗಳಾದ ಶ್ರೀಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿಗಣೇಶೋತ್ಸವ ಸಮಿತಿ, ಶ್ರೀ ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೋದ್ಭವ ಶ್ರೀ ಮಹಾಗಣಪತಿ ದೇವಾಲಯ ಸಮಿತಿ ಮಧುರಮ್ಮ ಬಡಾವಣೆ, ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಟಿಸಿಎಲ್, ಶ್ರೀ ಅಣ್ಣಪ್ಪ ದೇವಸ್ಥಾನ ಸಮಿತಿ ಶ್ರೀದೇವಿ, ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಸೇವಾ ಸಮಿತಿ ಬಾಲೆಕಾಡು, ಶ್ರೀ ಕೊಡಂಗಲ್ಲೂರು ಕುರುಂಬ ಭಗವತಿ ದೇವಾಲಯ ಗದ್ದೆಹಳ್ಳ, ಶ್ರೀ ನಾಗದೇವತೆ ದೇವಸ್ಥಾನ ಮಧುರಮ್ಮ ಬಡಾವಣೆ, ಶ್ರೀಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಶ್ರೀ ಬಸವೇಶ್ವರ ದೇವಾಲಯ ಸಮಿತಿ ಗದ್ದೆಹಳ್ಳ ಸಹಭಾಗಿತ್ವದಲ್ಲಿ ನಡೆಯಲಿದೆ. ದಿನದ ಅಂಗವಾಗಿ 7 ರಂದು ಸ್ಥಳ ಶುದ್ಧಿ ಕಲಶ ಬೆಳಗ್ಗೆ 7.30 ರಿಂದ 8.30 ರವರೆಗೆ, 9. ಗಂ ಮಹಾಮಂಗಳಾರತಿ ನಡೆಯಲಿದೆ. 9 ರಿಂದ 10. ಗಂಟೆಯವರೆಗೆ ಹರಕೆ ಸಮರ್ಪಣೆ, ಮಧ್ಯಾಹ್ನ 1.30 ರಿಂದ 3.30 ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಶ್ರೀಧರ್‌ಕುಮಾರ್ ಮತ್ತು ಆಡಳಿತ ಮಂಡಳಿ ತಿಳಿಸಿದೆ.