ಸಾರಾಂಶ
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವೇತನ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತುಂಬಾ ಹಿನ್ನಡೆಯಾಗುತ್ತಿರುವ ಹಿನ್ನಲೆಯಲ್ಲಿ ಪಂಚಾಯಿತಿ ವತಿಯಿಂದ ನೀರಿನ ದರ ಹಾಗೂ ಕರ ವಸೂಲಾತಿ ಅಭಿಯಾನಕ್ಕೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಿಡಿಓ ವಿ.ಜಿ.ಲೋಕೇಶ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವೇತನ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತುಂಬಾ ಹಿನ್ನಡೆಯಾಗುತ್ತಿರುವ ಹಿನ್ನಲೆಯಲ್ಲಿ ಪಂಚಾಯಿತಿ ವತಿಯಿಂದ ನೀರಿನ ದರ ಹಾಗೂ ಕರ ವಸೂಲಾತಿ ಅಭಿಯಾನಕ್ಕೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಿಡಿಓ ವಿ.ಜಿ.ಲೋಕೇಶ್ ಚಾಲನೆ ನೀಡಿದರು.ಈ ಹಿಂದಿನಿಂದಲ್ಲೂ ಹಲವು ಮಂದಿ ನೀರಿನ ತೆರಿಗೆ ಹಾಗೂ ಮನೆ ಕಂದಾಯ ಪಾವತಿಸದೆ ಸಾವಿರಾರು ರು. ಬಾಕಿ ಉಳಿಸಿಕೊಂಡಿದ್ದು ಪಂಚಾಯಿತಿ ಸಿಬ್ಬಂದಿ ವೇತನ, ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಚೆಸ್ಕಾಂ ಇಲಾಖೆಗೆ ಬೀದಿ ದೀಪ, ನೀರು ಸರಬರಾಜು ವಿದ್ಯುತ್ ಬಿಲ್ ವಾರ್ಷಿಕವಾಗಿ ಲಕ್ಷಾಂತರ ರು. ಪಾವತಿಸಬೇಕಾಗಿದೆ.
ಪಂಚಾಯಿತಿಗೆ ಅನುದಾನದ ಕೊರತೆ ಒಂದೆಡೆಯಾದರೆ ಪಂಚಾಯಿತಿ ಮೂಲಭೂತ ಸೌಲಭ್ಯಗಳಿಗೆ ಬೇಕಾಗಿರುವ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಈ ದಿಸೆಯಲ್ಲಿ ಸಂಪನ್ಮೂಲ ಕ್ರೋಢೀಕರಿಸಬೇಕಾಗಿರುವದರಿಂದ ಪಂಚಾಯಿತಿ ವತಿಯಿಂದ ಮನೆ ಹಾಗೂ ನೀರಿನ ತೆರಿಗೆ ಪಾತಿಸುವಂತೆ ಸಿಬ್ಬಂದಿ ಶ್ರೀನಿವಾಸ್ ಹಾಗೂ ಡಿ.ಎಂ.ಮಂಜುನಾಥ್ ಮನೆ ಮನೆಗೆ ಭೇಟಿ ನೀಡಲಿದ್ದಾರೆ.ಗ್ರಾಮಸ್ಥರು ತೆರಿಗೆ ಪಾವತಿಸುವ ಮೂಲಕ ಪಂಚಾಯಿತಿಯ ಮೂಲಭೂತ ಸಲವತ್ತು, ವೇತನ ಹಾಗೂ ಅಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಗ್ರಾಮಸ್ಥರಲ್ಲಿ ಮನವಿಕೊಂಡಿದ್ದಾರೆ.
ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಶಬ್ಬೀರ್ ಮತ್ತಿತರರು ಇದ್ದರು.