ಸಾರಾಂಶ
ಅನಂತಕುಮಾರ ಹೆಗಡೆ ವಿರುದ್ಧ ಮಾಧ್ಯಮಗಳ ವಿಡಿಯೋ ಆಧರಿಸಿ ಮುಂಡಗೋಡ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಡಗೋಡ: ವಿವಾದಿತ ಹೇಳಿಕೆ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಪಾಳಾ, ಇಂದೂರ ಹಾಗೂ ಚಿಗಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅನಂತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಸಿದ್ದರಾಮುಲ್ಲಾಖಾನ್’ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಹಿಂದೂ ದೇವಸ್ಥಾನಗಳ ಹುಂಡಿಗೆ ಹಾಕಿದ ಹಣವನ್ನು, ಚರ್ಚ್, ಮಸೀದಿಗಳಿಗೆ ನೀಡುತ್ತಾರೆ. ಇವ್ರ ಕೈಯಲ್ಲಿ ಅಧಿಕಾರ ಕೊಟ್ರೆ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.ಅನಂತಕುಮಾರ ಹೆಗಡೆ ವಿರುದ್ಧ ಮಾಧ್ಯಮಗಳ ವಿಡಿಯೋ ಆಧರಿಸಿ ಮುಂಡಗೋಡ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.