ಇಳಕಲ್ಲ: ಇಳಕಲ್ಲ ನಗರಕ್ಕೆ ಕುಡಿಯುವ ನೀರು ಪೂರೈಸುವ ಮಷಿನ್‌ಗಳು ದುರಸ್ತಿಗೆ ಬಂದಿದ್ದರಿಂದ 13 ದಿನಗಳಿಂದ ಇಳಕಲ್ಲ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಂಡು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಇಳಕಲ್ಲ: ಇಳಕಲ್ಲ ನಗರಕ್ಕೆ ಕುಡಿಯುವ ನೀರು ಪೂರೈಸುವ ಮಷಿನ್‌ಗಳು ದುರಸ್ತಿಗೆ ಬಂದಿದ್ದರಿಂದ 13 ದಿನಗಳಿಂದ ಇಳಕಲ್ಲ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಂಡು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜೀವಜಲಕ್ಕಾಗಿ ಜನರ ಪರದಾಟ ಶೀರ್ಷೆಕೆಯಡಿ ಕನ್ನಡಪ್ರಭ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರು ಮಂಗಳವಾರದಿಂದ ಟ್ಯಾಂಕರ್‌ ಮೂಲಕ ವಿತರಣೆ ಆರಂಭಿಸಿದ್ದಾರೆ.ಈ ವೇಳೆ ಮಾತನಾಡಿದ ಶ್ರೀನಿವಾಸ ಜಾಧವ, ಜನರು ಆತಂಕ ಪಡುವ ಅವಶ್ಯಕತೆಯಿಲ್ಲ. ಜಾಕವೆಲ್‌ ರಿಪೇರಿ ಆಗಲಿದೆ. ಜನರಿಗೆ ತೊಂದರೆ ಆಗಬಾರದೆಂದು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಆರಂಭಿಸಿದ್ದೇವೆ. ಜನರು ಸರದಿಯಲ್ಲಿ ನಿಂತು ನೀರು ಪೋಲು ಮಾಡದೇ ಹಿಡಿದುಕೊಳ್ಳಬೇಕೆಂದು ಮನವಿ ಮಾಡಿದರು.