ಉತ್ತಮ ಆಡಳಿತಕ್ಕಾಗಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ

| Published : May 01 2024, 01:16 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಈ ವರೆಗೆ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ

ಡಂಬಳ: ದೇಶದ ಆರ್ಥಿಕತೆ, ಸಾಮಾಜಿಕ ಮತ್ತು ರಕ್ಷಣಾತ್ಮಕ ಭದ್ರತೆ ಹಾಗೂ ಜನಪರ ಆಡಳಿತಕ್ಕಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಲು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಡಂಬಳ ಹೋಬಳಿಯ ಮುರಡಿ ತಾಂಡಾ, ಹಾರೋಗೇರಿ, ಬಸಾಪೂರ, ಕೆಲೂರ, ತಾಮ್ರಗುಂಡಿ, ಚುರ್ಚಿಹಾಳ, ಕದಾಂಪೂರ, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪೂರ, ಯಕ್ಲಾಸಾಪೂರ ಇತರ ಗ್ರಾಮಗಳಲ್ಲಿ ಬುಧವಾರ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚಿಸಿ ಮಾತನಾಡಿದ ಅವರು,

ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಆ ಅಭಿವೃದ್ಧಿ ಕಾರ್ಯಗಳು ಇಂದಿಗೂ ಮಾತನಾಡುತ್ತಿವೆ. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಈ ವರೆಗೆ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದ ಅವರು, ದೇಶಕ್ಕೆ ಮೋದಿ ಅಂತಹ ದಿಟ್ಟ ನಾಯಕರು ಬೇಕಾಗಿದ್ದು, ಹೀಗಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಹಕಾರಿ ಧುರೀಣ ಶಿವಕುಮಾರಗೌಡ ಎಸ್.ಪಾಟೀಲ ಮಾತನಾಡಿ, ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕಾದರೆ ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ಉತ್ಸುಕತೆ ಹೊಂದಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಆಯ್ಕೆಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ, ಕರಬಸಪ್ಪ ಹಂಚಿನಾಳ, ರಜನಿಕಾಂತ ದೇಸಾಯಿ, ಅಂದಪ್ಪ ಹಾರೋಗೇರಿ, ವೆಂಕನಗೌಡ ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಸಿದ್ದಪ್ಪ ಬರದೂರ, ನಾಗರಾಜ ಕಾಟ್ರಹಳ್ಳಿ, ಕೃಷ್ಣಾ ಬಂಡಿ, ಭೀಮರಡ್ಡಿ ರಾಜೂರ, ಮುತ್ತು ಅಳವಂಡಿ, ವೀರನಗೌಡ ಪಾಟೀಲ್, ಶರಣಪ್ಪ ಯತ್ನಟ್ಟಿ, ರಮೇಶ ತುರಕಾಣಿ ಸೇರಿದಂತೆ ಅನೇಕರು ಇದ್ದರು.