ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ನಗರದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಪರ ವಿವಿಧ ಪ್ರದೇಶಗಳಲ್ಲಿ ಬುಧವಾರ ಕಾರ್ಯಕರ್ತರು ಪ್ರಚಾರ ನಡೆಸಿದರು.ನಗರದ ಕೌಲಪೇಟೆ ಪ್ರದೇಶದಲ್ಲಿರುವ ಶ್ರೀ ಆನಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ, ವೀರಣ್ಣ ಚರಂತಿಮಠ ಅವರು ಸ್ಥಳೀಯ ನಾಗರಿಕರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ತಮ್ಮ ಪರ ಮತ ನೀಡುವಂತೆ ಮನವಿ ಮಾಡಿದರು. ವಾರ್ಡ್ ಸಂಖ್ಯೆ 03ರ ಬೂತ್ ಸಂಖ್ಯೆ 167 ಸೇರಿದಂತೆ ವಾರ್ಡ್ ಸಂಖ್ಯೆ 8, 10 ಹಾಗೂ 14ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ, ಮತದಾರರ ಬೆಂಬಲ ಕೋರಿದರು. ಇದೇ ವೇಳೆ, ಬಾಗಲಕೋಟೆಯ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂಬ ಸಂದೇಶದೊಂದಿಗೆ ನಗರದ ವಾಂಬೆ ಕಾಲೋನಿ ಪ್ರದೇಶದಲ್ಲಿ ಡಾ.ನವೀನ್ ವಿ. ಚರಂತಿಮಠ ಅವರ ನೇತೃತ್ವದಲ್ಲಿ ಪ್ರಚಾರ ನಡೆಯಿತು.
ನವನಗರದ 63ಎ ಸೆಕ್ಟರ್‌ನಲ್ಲಿ ನಡೆದ ಪ್ರಚಾರದಲ್ಲಿ ಚರಂತಿಮಠ ಅವರ ಕುಟುಂಬದ ರಾಜೇಶ್ವರಿ ಚರಂತಿಮಠ ಹಾಗೂ ಮಾಜಿ ಎಂಎಲ್ಸಿ ಎಂ.ಡಿ. ಲಕ್ಷ್ಮಿನಾರಾಯಣ್ ಭಾಗವಹಿಸಿ ಚರಂತಿಮಠ ಅವರಿಗೆ ಮತ ನೀಡಬೇಕು ಎಂದು ಬೆಂಬಲ ಸೂಚಿಸಿದರು. ಅಭಿವೃದ್ಧಿ, ಜನಸೇವೆ ಮತ್ತು ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡುವ ಭರವಸೆ ನೀಡಿರುವ ಚರಂತಿಮಠ ಅವರ ಪರ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ಕಾರ್ಯಕರ್ತರದ್ದು.ಛಲವಾದಿ ಸಮಾಜ ಬಿಜೆಪಿಗೆ ಸೇರ್ಪಡೆ:
ಉಪಚುನಾವಣೆಯ ಹಿನ್ನೆಲೆ ಮತಕ್ಷೇತ್ರದ ಬೊಮ್ಮಣಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಭಾಗವಹಿಸಿ ಮತಯಾಚನೆ ನಡೆಸಿದರು. ಈ ವೇಳೆ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಜಿ.ಎನ್.ಪಾಟೀಲ, ಸಂಗಣ್ಣ ಕಲಾದಗಿ, ದುಂಡಪ್ಪ ಏಳಮ್ಮಿ, ಮಂಜುನಾಥ ಮಿಶೆ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಮೂರ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಸುಭಾಸಚಂದ್ರ ಬಸಪ್ಪ ರಾಮೋಡಗಿ, ರಾಚಯ್ಯ ಬಸಯ್ಯ ಹಿರೇಮಠ್, ಹಣಮಂತ ರಾಮೋಡಗಿ, ಮಹಾಂತೇಶ ಹುಳ್ಯಾಳ್, ಪರಶುರಾಮ್ ಅಂಬಿಗೇರ, ಶಂಕ್ರಪ್ಪ ತಳವಾರ, ಪ್ರವೀಣ್ ಕೌಟನವರ, ಗಂಗಪ್ಪ ಅಂಬಿಗೇರ, ಮುತ್ತಪ್ಪ ರಾಮೋಡಗಿ, ತಿಪ್ಪಣ್ಣ ಅಂಬಿಗೇರ, ಬಸವರಾಜ ಸತಿಹಾಳ, ಮಲಪ್ಪ ದಂಡಿನ್, ಬಾಲಪ್ಪ ದಂಡಿನ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಛಲವಾದಿ ಸಮಾಜದ ಮುಖಂಡರಾದ ಆಸಂಗೆಪ್ಪ ಛಲವಾದಿ, ನಾಗಪ್ಪ ದಂಡಿನ, ದ್ಯಾಮಣ್ಣ ಕಾಳಿ, ರಾಮಪ್ಪ ದಂಡಿನ, ಪರಸಪ್ಪ ಕಾಳಿ, ಹಣಮಂತ ಛಲವಾದಿ, ಪರಸಪ್ಪ ದಂಡಿನ, ಯಲ್ಲಪ್ಪ ಕಾಳಿ, ಪ್ರಕಾಶ್ ಕಾಳಿ, ಶಿವಪ್ಪ ದಂಡಿನ, ಬಸವರಾಜ ಛಲವಾದಿ, ಕಮಲ್ ಛಲವಾದಿ, ಮಂಜುನಾಥ್ ಕಾಳಿ, ಮಂಜು ಛಲವಾದಿ, ಜಗದೀಶ ಕಾಳಿ, ಮೌನೇಶ್ ದಂಡಿನ, ರಾಜು ದಂಡಿನ, ಸಾಗರ್ ಛಲವಾದಿ, ಹಣಮಂತ ದಂಡಿನ, ಹಣಮಂತ ಕಾಳಿ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾದರು