ಹಿಂದುಳಿದ ಜಿಲ್ಲೆಯ ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ

| Published : Apr 05 2024, 01:02 AM IST

ಹಿಂದುಳಿದ ಜಿಲ್ಲೆಯ ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವಾಂಗೀಣ ಅಭಿವೃದ್ಧಿಗಾಗಿ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಯನ್ನು ಬಯಸಿ ಹಾಗೂ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಬುದ್ಧ ವಕೀಲರಾದ ನೀವೆಲ್ಲರು ಬಿಜೆಪಿಯನ್ನು ಬೆಂಬಲಿಸುವತೆ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ವಾಂಗೀಣ ಅಭಿವೃದ್ಧಿಗಾಗಿ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಯನ್ನು ಬಯಸಿ ಹಾಗೂ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಬುದ್ಧ ವಕೀಲರಾದ ನೀವೆಲ್ಲರು ಬಿಜೆಪಿಯನ್ನು ಬೆಂಬಲಿಸುವತೆ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು. ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ವಕೀಲರ ಸಂಘದ ಕಟ್ಟಡದಲ್ಲಿ ವಕೀಲರ ಸಂಘದ ಪದಾಧಿಕಾರಿಯನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ ಅವರು, ಕಳೆದ ಹತ್ತುಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಅಬಿವೃದ್ದಿ ಕೆಲಸಗಳು ಹಾಗೂ ದೇಶದ ಭದ್ರತೆ ಮತ್ತು ಸುರಕ್ಷತೆಗೆ ಅವರು ಕೈಗೊಂಡ ಯೋಜನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮೋದಿ ಅವರನ್ನು ನೋಡಲು ವಿಶ್ವವೇ ಕಾತುವಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಿಮ್ಮ ಬಾಲರಾಜು ಸ್ಪರ್ಧೆ ಮಾಡಿದ್ದೇವೆ. ಅಶೀರ್ವಾದ ಮಾಡಬೇಕು ಎಂದರು. 1999ರಲ್ಲಿ ಬಿಜೆಪಿಯಿಂದ ಕೊಳ್ಳೇಗಾಲ ಕ್ಷೇತ್ರದಲ್ಲಿ ಸ್ಪರ್ಧಿಸಿ ಜೊತೆ. 2004ರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದೆ. ನನಗೆ ಸಿಕ್ಕ ಮೂರುವರೆ ವರ್ಷದ ಅಲ್ಪ ಅವಧಿಯಲ್ಲಿಯೇ ಕೊಳ್ಳೇಗಾಲ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಆ ನಂತರ ನನಗೆ ರಾಜಕೀಯವಾಗಿ ಅವಕಾಶ ಸಿಗಲಿಲ್ಲ ಎಂದರು.ಈಗ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡುವ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದೆ. ಪ್ರಧಾನಿ ನರೇಂದ್ರಮೋದಿ ದೇಶದಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದ ಆರ್.ಧ್ರುವನಾರಾಯಣ ಅವರಂತೆ ನನಗೂ ಜಿಲ್ಲೆಯ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಮಾತನಾಡಿದ ವಕೀಲರ ಸಂಘ ಪದಾಧಿಕಾರಿಗಳು ಮಾತನಾಡಿ, ಬಾಲರಾಜು ನಮ್ಮ ಸಂಘಕ್ಕೆ ಮತಯಾಚನೆಗೆ ಆಗಮಿಸಿದ್ದಾರೆ. ಅವರಿಗೆ ಬೆಂಬಲ ನೀಡುವ ಜೊತೆಗೆ ಅವರು ಗೆಲುವು ಸಾಧಿಸುವವರಿದ್ದಾರೆ. ಸಂಸದರಾಗ ಬಳಿಕ ವಕೀಲರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷೆ ಎಸ್.ನಂಜಯ್ಯ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ದೊಡ್ಡಮೊಳೆ, ಜಂಟಿ ಕಾರ್ಯಧರ್ಶಿ ಮೋಹನ್ ಜಗದೀಶ್, ಖಜಾಂಚಿ ಸಿ.ಸಿ.ರಮೇಶ್, ಕಾರ್ಯ ಕಾರಿಣಿ ಸಮಿತಿ ಸದಸ್ಯ ಜಯಪ್ರಕಾಶ್, ಹಿರಿಯ ವಕೀಲರಾದ ಪುಟ್ಟರಾಜು, ವಿ. ನಾಗರಾಜೇಂದ್ರ, ಸಿ. ಚಿನ್ನಸ್ವಾಮಿ, ಹರವೆ ಮಂಜು, ಹಿರಿಯ ವಕೀಲರಾದ ಜಿಲ್ಲಾ ಯುವ ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ್, ಜಿಲ್ಲಾ ಕಾರ್ಯದರ್ಶಿ ನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜ್ ನಾಯಕ, ಜಿಲ್ಲಾ ಮಾಧ್ಯಮ ಪ್ರಮುಖ್ ವಿರೇಂದ್ರ, ರಾಮಸಮುದ್ರ ಪರಶಿವ, ಹೊಂಗನೂರು ಮಹದೇವಸ್ವಾಮಿ, ಬೆಟ್ಟದಪುರ ಮಹದೇವಸ್ವಾಮಿ ಮತ್ತಿತರರಿದ್ದರು.