ಶಾಸಕ ಪೊನ್ನಣ್ಣಗೆ ಜಾಲತಾಣದಲ್ಲಿ ಬೆಂಬಲ

| Published : Apr 07 2025, 12:30 AM IST

ಸಾರಾಂಶ

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್‌. ಪೊನ್ನಣ್ಣ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಶುರುವಾಗಿದೆ.

ಮಡಿಕೇರಿ : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಶುರುವಾಗಿದೆ.

We stand with you ponnanna ಎಂದು ಎಲ್ಲೆಡೆ ಪೋಸ್ಟ್ ಹರಿದಾಡುತ್ತಿದೆ.

ಕೊಡವ ಸಾಂಪ್ರದಾಯಿಕ ಉಡುಪು ಹಾಕಿರುವ ಪೊನ್ನಣ್ಣ ಅವರ ಫೋಟೋಗಳನ್ನು ಹಾಕಿ ಬೆಂಬಲ ವ್ಯಕ್ತಪಡಿಸಲಾಗುತ್ತಿದೆ.

ಎರಡು ತಿಂಗಳ ಹಿಂದೆ ಹಾಳಾದ ಶೌಚಾಲಯದಲ್ಲಿ ಪೊನ್ನಣ್ಣ ಅವರ ಫೋಟೋ ಇರುವಂತೆ ಎಡಿಟ್ ಮಾಡಿ ಪೋಸ್ಟ್ ಹಾಕಲಾಗಿತ್ತು. ಇದೇ ಕಾರಣದಿಂದ ಮೂವರ ಮೇಲೆ ಎಫ್ಐಆರ್ ಆಗಿತ್ತು. ಪ್ರಕರಣದ ಎ3 ಆರೋಪಿ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಅದೇ ಪೊನ್ನಣ್ಣ ಅವರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆಂಬಲ ವ್ಯಕ್ತಪಡಿಸಲಾಗುತ್ತಿದೆ.

ಬಿಜೆಪಿ ಮತ್ತು ಬಿಜೆಪಿ ಮಾಜಿ ಶಾಸಕರು ವಿನಯ್ ಸಾವಿನ ವಿಚಾರವನ್ನು ರಾಜಕಾರಣಕ್ಕೆ ಬಳಸಿದೆ ಎಂದು ಫೋಸ್ಟ್ ಹರಿಬಿಡಲಾಗುತ್ತಿದೆ.