ಸಾರಾಂಶ
ಹುಕ್ಕೇರಿ: ತಾಲೂಕಿನ ವಿವಿಧ ಗ್ರಾಮಗಳ ದಲಿತ ಮುಖಂಡರ ನಿಯೋಗ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿತು. ಜಾರಕಿಹೊಳಿ ಗೃಹ ಕಚೇರಿಯಲ್ಲಿ ರವಿವಾರ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸಂವಿಧಾನದ ಪೀಠಿಕೆ, ಹೂ ಗುಚ್ಚ ನೀಡಿ ಸನ್ಮಾನಿಸಿದರು.
ಹುಕ್ಕೇರಿ: ತಾಲೂಕಿನ ವಿವಿಧ ಗ್ರಾಮಗಳ ದಲಿತ ಮುಖಂಡರ ನಿಯೋಗ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿತು. ಜಾರಕಿಹೊಳಿ ಗೃಹ ಕಚೇರಿಯಲ್ಲಿ ರವಿವಾರ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸಂವಿಧಾನದ ಪೀಠಿಕೆ, ಹೂ ಗುಚ್ಚ ನೀಡಿ ಸನ್ಮಾನಿಸಿದರು. ಕ್ಷೇತ್ರದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಪರ ಒಲವು ಹೆಚ್ಚಿದೆ. ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳು ಕೈಹಿಡಿಯಲಿದ್ದು, ಈ ಮೂಲಕ ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕಾ ಲೋಕಸಭೆಗೆ ಆಯ್ಕೆಯಾಗಲಿದ್ದಾರೆ ಎಂದು ದಲಿತ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಅಕ್ಷಯ ವೀರಮುಖ, ಅಶೋಕ ತಳವಾರ, ಗಣಪತಿ ಕಾಂಬಳೆ, ದೀಪಕ್ ವೀರಮುಖ, ರಾಜೀವ್ ವೀರಮುಖ, ಗಜಾನನ ಕಾಂಬಳೆ, ಗುರುನಾಥ್ ಶಿಂಧೆ, ಬಾಬು ಕಡಲಗಿ, ಪ್ರಶಾಂತ ತಳವಾರ, ದಯಾನಂದ ತಿಮ್ಮಣ್ಣವರ, ಶಿವಾನಂದ ತಳವಾರ, ಪರಶುರಾಮ ದಂಡಗಿದಾಸ, ಸಚಿನ್ ಚಿಂಚಣಿ, ಸಂಜು ಜೀವಣ್ಣವರ, ಬಾಳಸಾಹೇಬ್ ಕೋಳಿ, ಪ್ರಕಾಶ ಕೋಳಿ, ಚಂದ್ರು ವಾರಕರಿ, ಪ್ರವೀಣ್ ಜಕ್ಕಪ್ಪಗೋಳ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))