ಸಾರಾಂಶ
ಬೀಳಗಿ ಮತಕ್ಷೇತ್ರದ ಎಲ್ಲ ರಸ್ತೆಗಳ ಸುಧಾರಣೆಗೆ ನಾನು ಬದ್ಧನಾಗಿದ್ದು, ನಾಗರಿಕರು ಆತಂಕ ಪಡಬಾರದು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಯ ನೆಮ್ಮದಿಯ ಬದುಕಿಗೆ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಜನರಿಗೆ ಗೊತ್ತು.
ಕನ್ನಡಪ್ರಭ ವಾರ್ತೆ ಕೆರೂರ
ಸುಗಮ ಸಂಚಾರ ಅಭಿವೃದ್ಧಿಗೆ ಪೂರಕವಾಗಿದ್ದು, ಪ್ರಯಾಣಿಕರಿಗೆ ಹಾಗೂ ರೈತರ ಸರಕು ಸಾಗಾಣಿಕೆಗೆ ಉತ್ತಮ ರಸ್ತೆಯಿದ್ದರೆ ಅಪಘಾತ ರಹಿತ ಸಂಚಾರದ ಜೊತೆಗೆ ವ್ಯಾಪಾರ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆಂದು ಶಾಸಕ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಉತ್ತರ ವಲಯ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಹುನಗುಂದ ವತಿಯಿಂದ ಆಯೋಜಿಸಿದ ₹6 ಕೋಟಿ ವೆಚ್ಚದ ರಾಜ್ಯ ಹೆದ್ದಾರಿ 134 ಬಾದಾಮಿ ಗೊಡಚಿ ಗೋಕಾಕ ಫಾಲ್ಸ್ 3.56ರಿಂದ 10.95ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೀಳಗಿ ಮತಕ್ಷೇತ್ರದ ಎಲ್ಲ ರಸ್ತೆಗಳ ಸುಧಾರಣೆಗೆ ನಾನು ಬದ್ಧನಾಗಿದ್ದು, ನಾಗರಿಕರು ಆತಂಕ ಪಡಬಾರದು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಯ ನೆಮ್ಮದಿಯ ಬದುಕಿಗೆ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಜನರಿಗೆ ಗೊತ್ತು. ವಿರೋಧಿಗಳ ಅಪಪ್ರಚಾರದ ಸುಳ್ಳು ವದಂತಿ ನಂಬಲು ಜನ ಮೂರ್ಖರಲ್ಲ ಮುಂಬರುವ ದಿನಗಳಲ್ಲಿ ಜನರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಜನರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಜಿಪಂ ಮಾಜಿ ಸದಸ್ಯ ಡಾ.ಎಮ್.ಜಿ.ಕಿತ್ತಲಿ ಮಾತನಾಡಿ, ಶಾಸಕ ಜೆ.ಟಿ.ಪಾಟೀಲ ಅವರ ದಕ್ಷ ಆಡಳಿತದಲ್ಲಿ ಬೀಳಗಿ ಕ್ಷೇತ್ರ ಅಭಿವೃದ್ಧಿಯ ಪರ್ವವಾಗುತ್ತದೆ ಎಂದು ಹೇಳಿದರು. ಪೂಜಾ ಸಮಾರಂಭದಲ್ಲಿ ಗುತ್ತಿಗೆದಾರ ಬಿ.ಎನ್.ನಾಗನಗೌಡ್ರ, ಡಾ.ಬಿ.ಕೆ.ಕೊವಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಮತ್ತಿಕಟ್ಟಿ, ರವಿ ಲಮಾಣಿ, ಹನಮಂತಗೌಡ ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ ಭೀಮಪ್ಪ ಬಿರಾದಾರ, ಅಭಿಯಂತರ ರಾಜು ಬಿರಾದಾರ ಹಲಕುರ್ಕಿ ಗ್ರಾಮಸ್ಥರು ಉಪಸ್ಥಿತರಿದ್ದರು.