ಉಗ್ರರ ಮೇಲೆ ಕಠಿಣ ಕ್ರಮಕ್ಕೆ ಬೆಂಬಲ ಅವಶ್ಯ

| Published : May 01 2025, 12:50 AM IST

ಸಾರಾಂಶ

ಅತ್ತೆ ಮತ್ತು ಸೊಸೆ ಬಾಂಧವ್ಯ ಗಟ್ಟಿಗೊಳ್ಳಬೇಕು, ಹೀಗಾದಾಗ ಮಾತ್ರ ನೆಮ್ಮದಿಯ ಜೀವನ ಸಾರ್ಥಕ ಪಡೆದುಕೊಳ್ಳುತ್ತದೆ

ಕೊಟ್ಟೂರು: ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರರು ಪ್ರವಾಸಿಗರ ಹತ್ಯೆಗೈದು ಅಟ್ಟಹಾಸ ತೋರಿರುವುದು ಖಂಡನೀಯ.ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಲ್ಲ ರಾಜ್ಯದ ಮುಖ್ಯಮಂತ್ರಿ ಹಾಗೂ ಜನತೆ ಪ್ರಧಾನಿಗಳ ಬೆಂಬಲವಾಗಿ ನಿಲ್ಲಬೇಕು ಎಂದು ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಚಾನುಕೋಟಿ ಮಠದವರು ಬಸವೇಶ್ವರ ಮತ್ತು ಮರಳುಸಿದ್ದೇಶ್ವರ ಜಯಂತಿ ಕಾರ್ಯಕ್ರಮದ ನಿಮಿತ್ತ ಬುಧುವಾರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು .

ಅತ್ತೆ ಮತ್ತು ಸೊಸೆ ಬಾಂಧವ್ಯ ಗಟ್ಟಿಗೊಳ್ಳಬೇಕು, ಹೀಗಾದಾಗ ಮಾತ್ರ ನೆಮ್ಮದಿಯ ಜೀವನ ಸಾರ್ಥಕ ಪಡೆದುಕೊಳ್ಳುತ್ತದೆ. ಸಾಮೂಹಿಕ ವಿವಾಹದಲ್ಲಿ ಅನೇಕ ಶ್ರೀಗಳು ಮತ್ತು ಇತರ ಗಣ್ಯರು ಪಾಲ್ಗೊಂಡು ನೂತನ ವಧು-ವರರಿಗೆ ಆರ್ಶಿವಾದ ಮಾಡುವುದು ನಿಜಕ್ಕೂ ಉಳಿದೆಲ್ಲ ಅದ್ಧೂರಿಯ ಮದುವೆಗಳಿಗಿಂತ ಶ್ರೇಷ್ಠ ಎಂದರು.

ಸಾಮೂಹಿಕ ವಿವಾಹಗಳಲ್ಲಿ ಶ್ರೀಮಂತರು ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು, ಇದರಿಂದ ಅನಗ್ಯತ ಸಂಪನ್ಮೂಲ ಹಾಳಾಗುವುದನ್ನು ತಪ್ಪಿಸಬಹುದು ಎಂದರು.

ಸಾಮೂಹಿಕ ವಿವಾಹವನ್ನು ಚಾನುಕೋಟಿ ಮಠ ಹಮ್ಮಿಕೊಳ್ಳುವ ಮೂಲಕ ಅಂದಾಜು ₹60 ಲಕ್ಷ ಸಂಗ್ರಹ ಹಾಳಾಗದಂತೆ ರಾಷ್ಟ್ರದ ಸಂಪನ್ಮೂಲಕ್ಕೆ ನೆರವಾಗಿದೆ ಎಂದರು.

ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸ್ಯಾಸ್ಥ ಕಾಪಾಡಲು ಜನತೆ ಇಂತಹ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲವಾಗಿ ನಿಲ್ಲುವ ಮೂಲಕ ಆದರ್ಶ ನಾಡನ್ನು ಕಟ್ಟಲು ಮುಂದಾಗಿರುವುದಕ್ಕೆ ಕೃತಜ್ಞತೆ ಚಾನುಕೋಟಿ ಮಠ ಸಲ್ಲಿಸುತ್ತದೆ ಎಂದರು.

ಬುಧುವಾರ ನಡೆದ ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 27ಕ್ಕೂ ಹೆಚ್ಚು ಜಂಗಮ ವಟುಗಳು ಶಿವದೀಕ್ಷೆ ಪಡೆದುಕೊಂಡರು.

ನಂದೀಪುರದ ಶ್ರೀಚರಂತೇಶ್ವರ ಸ್ವಾಮೀಜಿ, ಜಿಪಂ ಮಾಜಿ ಸದಸ್ಯರುಗಳಾದ ಪಿ.ಎಚ್.ದೊಡ್ಡರಾಮಣ್ಣ, ಎಂ.ಎಂ.ಜೆ ಹರ್ಷವರ್ಧನ್, ಪಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ, ಉಪಾಧ್ಯಕ್ಷ ಜಿ.ಸಿದ್ದಯ್ಯ ಸದಸ್ಯ ಕೆಂಗರಾಜ, ಬಿ. ಮರಿಸ್ವಾಮಿ, ಎಇಇ ನಾಗರಾಜ, ಜಿ.ಎಂ.ಕಾರ್ತಿಕ್, ಎಂ.ಜಿ.ರುದ್ರಯ್ಯ, ವೀಣಾ ವಿವೇಕಾನಂದ ಗೌಡ, ಕರಡಿ ಕೊಟ್ರಶ್ ಅಟವಾಳಿಗೆ ಅಂಬರೇಶ್, ಉಮಾದೇವಿ ಬಸವರಾಜ, ಅಜ್ಜನ ಗೌಡ ಮತ್ತಿತರರು ವೇದಿಕೆಯಲ್ಲಿದರು.

ಆಕರ್ಷ ಹಳೆಮನೆ ಸ್ವಾಗತಿಸಿದರು. ಅರುಣ್ ಮೈದೂರು ವಿಶ್ವನಾಥ್ ನಿರೂಪಿಸಿದರು.