ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ನನ್ನನ್ನು ಬೆಂಬಲಿಸಿ: ವಿ.ಸೋಮಣ್ಣ

| Published : Apr 18 2024, 02:19 AM IST

ಸಾರಾಂಶ

ಒಂದು ವರ್ಷದಲ್ಲಿ ಕೊರಟಗೆರೆ, ಮಧುಗಿರಿ ಮಧ್ಯದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡಲು ನನಗೆ ಈ ಭಾರಿ ಆಶೀರ್ವಾದ ಮಾಡಿ ಎಂದು ತುಮಕೂರು ಲೋಕಸಭಾ ಬಿಜೆಪಿ ಆಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ ಒಂದು ವರ್ಷದಲ್ಲಿ ಕೊರಟಗೆರೆ, ಮಧುಗಿರಿ ಮಧ್ಯದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡಲು ನನಗೆ ಈ ಭಾರಿ ಆಶೀರ್ವಾದ ಮಾಡಿ ಎಂದು ತುಮಕೂರು ಲೋಕಸಭಾ ಬಿಜೆಪಿ ಆಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋ ಸಂದರ್ಭದಲ್ಲಿ ಮತದಾರರನ್ನ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ನರೇಂದ್ರ ಮೋದಿಯವರಿಗೆ ಸರಿಸಾಟಿ ಯಾರು ಇಲ್ಲ. ಮತ್ತೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದರು.

ಬೆಂಗಳೂರಿನ ಗೋವಿಂದರಾಜ ನಗರದಂತೆ ತುಮಕೂರು ಜಿಲ್ಲೆಯ ಎಂಟು ತಾಲೂಕನ್ನು ಅಭಿವೃದ್ಧಿ ಮಾಡಲು ಬಿಜೆಪಿಗೆ ಮತ ನೀಡಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನರೇಂದ್ರ ಮೋದಿ ಪ್ರದಾನಿಯಾದರೆ ದೇಶ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಮಾತನಾಡಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಮರ್ಥ ನಾಯಕ ವಿ.ಸೋಮಣ್ಣ ಅವರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಮಾಜಿ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮಾತನಾಡಿ, ನಮ್ಮ ಪ್ರಧಾನಮಂತ್ರಿ ಅವರು ತಂದಿರುವ ಯೋಜನೆಗಳು ಜನಪರವಾಗಿದ್ದು, ಪ್ರಪಂಚವೇ ಅವರನ್ನ ವಿಶ್ವದ ನಾಯಕ ಎಂದು ಘೋಷಣೆ ಮಾಡವ ಕಾಲ ಸನಿಹವಿದ್ದು, ಈ ದೇಶಕ್ಕೆ ಮತ್ತೆ ಮೂರನೇ ಬಾರಿ ಪ್ರಧಾನಿಯಾಗಲು ಪ್ರತಿಯೊಬ್ಬರು ಬಿಜೆಪಿಗೆ ಮತನೀಡಿ. ಎನ್.ಡಿ.ಎ ಆಭ್ಯರ್ಥಿಯಾದ ವಿ.ಸೋಮಣ್ಣ ಅವರಿಗೆ ಮತ ನೀಡಿ ತುಮಕೂರು ಲೋಕಸಭಾ ಕ್ಷೇತ್ರವನ್ನ ಅಭಿವೃದ್ಧಿ ಸಹಕರಿಸಬೇಕು ಎಂದರು.

ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಓಬಳಪುರ, ಬೆಳಧರ, ಗೊಲ್ಲಹಳ್ಳಿ, ಅಗ್ರಹಾರ, ಬುಕ್ಕಪಟ್ಟಣ, ಕುರಂಕೋಟೆ, ಬೂದಗವಿ, ತುಂಬಾಡಿ, ವಡ್ಡಗೆರೆ, ಹುಲೀಕುಂಟೆ, ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ, ಬೈರೇನಹಳ್ಳಿ, ಕೊಡಗದಾಲ, ಬ್ಯಾಲ್ಯ, ಪುರವಾರ, ಗೊಂದಿಹಳ್ಳಿ, ಕೋಡ್ಲಾಪುರ, ಕೊಂಡವಾಡಿಯಲ್ಲಿ ಮತಯಾಚನೆ ಮಾಡಿದರು.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಮಾಜಿ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಅನಿಲ್‌ಕುಮಾರ್, ತಾಲೂಕು ಅಧ್ಯಕ್ಷ ಡಾ.ಕೆ.ಎಲ್. ದರ್ಶನ್ ಯುವ ಮೋಚಾ ಜಿಲ್ಲಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಪವನಕುಮಾರ್, ಮುಖಂಡರಾದ ಕಾಮರಾಜು, ವೆಂಕಟಚಲಯ್ಯ, ಗುರುಧತ್, ಪ್ರಕಾಶ್, ಕುಸುಮ, ಸೀಬಿರಂಗಮ್ಮ, ಮರಡಪ್ಪ, ವೆಂಕಟೇಶ್, ವಿಶ್ವನಾಥ್ ಅಪ್ಪಾಜ್ಪ, ಸಿದ್ದಮಲ್ಲಪ್ಪ, ವೀರಕ್ಯಾತರಾಯಪ್ಪ, ದಯಾನಂದ್, ಚೇತನ್, ಸಿದ್ದನಂಜಪ್ಪ, ಚಂದ್ರಮೋಹನ್, ಹನುಮಂತರಾಜು, ಗೋಪಿ, ಕಿಶೋರ್, ಮಂಜುನಾಥ್, ಸೇರಿದಂತೆ ಇತರರು ಇದ್ದರು.