ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕನಗನಮರಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷನಾಗಿ ಸುರೇಶ್ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷ ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುರೇಶ್ ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಸುರೇಶ್ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಎಲ್ಲಾ ನಿರ್ದೇಶಕರು, ಮುಖಂಡರು ಅಭಿನಂದಿಸಿದರು.ನಂತರ ಅಧ್ಯಕ್ಷ ಸುರೇಶ್ ಮಾತನಾಡಿ, ಡೈರಿ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಸೇರಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರಪಡೆದು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ಪುಟ್ಟೇಗೌಡ ಮಾತನಾಡಿ, ಗ್ರಾಮದ ಮುಖಂಡರು, ಯಜಮಾನರು ಹಾಗೂ ನಿರ್ದೇಶಕರು ಎಲ್ಲರು ಸೇರಿ ಡೈರಿ ಅಧ್ಯಕ್ಷರನ್ನಾಗಿ ಸುರೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸುರೇಶ್ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಂಘಕ್ಕೆ ಒದಗಿಸಿಕೊಡುವ ಕೆಲಸ ಮಾಡಲಿ ಎಂದು ಹಾರೈಸಿದರು.ಈ ವೇಳೆ ಉಪಾಧ್ಯಕ್ಷೆ ಅಂಬುಜ, ಕೋಸೇಗೌಡ, ಸ್ವಾಮಿ, ಹೊನ್ನೇಗೌಡ, ಕೆ.ಜೆ.ಕುಮಾರ್, ಸಾವಿತ್ರಮ್ಮ, ರಮೇಶ್, ಕೆ.ಎನ್.ಕುಮಾರ್, ಕೆ.ಎಸ್.ಕೇಶವ, ನಂಜಯ್ಯ, ಕೆ.ಜೆ.ಸೋಮಣ್ಣ, ನಿರ್ದೇಶಕರಾದ ಮುಖಂಡರಾದ ಕೆ.ಪುಟ್ಟೇಗೌಡ, ಗ್ರಾಪಂ ಸದಸ್ಯ ಮಂಜುನಾಥ್, ಸೊಸೈಟಿ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ನಿರ್ದೇಶಕ ಬೊಮ್ಮೇಗೌಡ, ಯಜಮಾನರಾದ ಕುಮಾರ್, ರಾಮಣ್ಣ, ನಿಂಗೇಗೌಡ, ವಕೀಲ ಬಸವೇಗೌಡ, ಚಂದ್ರಶೇಖರ್, ಸುರೇಂದ್ರಕುಮಾರ್, ಮಿನಿಕುಮಾರ್, ವರುಣ್‌ಕುಮಾರ್, ರಮೇಶ್, ಮೋಹನ್‌ಕುಮಾರ್, ಕೆ.ಎಸ್.ರಾಜು, ಆರ್.ನಿಂಗೇಗೌಡ, ಕಾರ್‍ಯದರ್ಶಿ ವರುಣ್‌ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.