ಸಾರಾಂಶ
ಮಂಗಳವಾರ ಮಧ್ಯಾಹ್ನ ತಮ್ಮ ಟೊಮೋಟೊ ಬೆಳೆದಿದ್ದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನಿನಲ್ಲೇ ಅಡಗಿ ಕುಳಿತ್ತಿದ್ದ ಹುಲಿ ಏಕಾಏಕಿ ಸುರೇಶ್ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಸುರೇಶ್ ಅವರ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಈ ವೇಳೆ ಪಕ್ಕದಲ್ಲೆ ಇದ್ದ ಕೆಲಸಗಾರರು ಕೂಗಿಕೊಂಡ ಪರಿಣಾಮ ಹುಲಿ ಪರಾರಿಯಾಗಿತ್ತು.
ಕನ್ನಡಪ್ರಭ ವಾರ್ತೆ ನಂಜನಗೂಡು
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾಲೂಕಿನ ನಾಗಣಪುರ ಗ್ರಾಮದಲ್ಲಿ ಜರುಗಿದ್ದು,ನಂತರ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ನಾಗಣಪುರ ಗ್ರಾಮದ ಸುರೇಶ್ (45) ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಂಗಳವಾರ ಮಧ್ಯಾಹ್ನ ತಮ್ಮ ಟೊಮೋಟೊ ಬೆಳೆದಿದ್ದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನಿನಲ್ಲೇ ಅಡಗಿ ಕುಳಿತ್ತಿದ್ದ ಹುಲಿ ಏಕಾಏಕಿ ಸುರೇಶ್ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಸುರೇಶ್ ಅವರ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಈ ವೇಳೆ ಪಕ್ಕದಲ್ಲೆ ಇದ್ದ ಕೆಲಸಗಾರರು ಕೂಗಿಕೊಂಡ ಪರಿಣಾಮ ಹುಲಿ ಪರಾರಿಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಎಸಿಎಫ್ ಪರಮೇಶ್, ಆರ್.ಎಫ್.ಒ ನಾರಾಯಣ್, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಹುಲಿಯನ್ನು ಕಾಡಿನತ್ತ ಹಿಮ್ಮಟ್ಟಿಸಲು ಕಾರ್ಯಾಚರಣೆ ಆರಂಭಿಸಿದಾಗ ಹುಲಿ ಕಾಣಿಸಿಕೊಂಡ ತಕ್ಷಣ ಹುಲಿಗೆ ಅರವಳಿಕೆ ಮದ್ದು ನೀಡಿ, ನಂತರ ಬಲೆ ಹಾಕಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.