ಬಿಮ್ಸ್‌ನಲ್ಲಿ ಅವ್ಯಾಸ್ಕುಲಾರ್ ನೆಕ್ರೋಸಿಸ್‌ಗೆ ಶಸ್ತ್ರಚಿಕಿತ್ಸೆ

| Published : Jul 16 2024, 12:32 AM IST

ಬಿಮ್ಸ್‌ನಲ್ಲಿ ಅವ್ಯಾಸ್ಕುಲಾರ್ ನೆಕ್ರೋಸಿಸ್‌ಗೆ ಶಸ್ತ್ರಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಯ ಬಿಮ್ಸ್ ಆಸ್ಪತ್ರೆಯ ಎಲುವು ಮತ್ತು ಕೀಲುಗಳ ವಿಭಾಗದಲ್ಲಿ ಪ್ರಾಕ್ಸಿಮಲ್ ಹ್ಯೂಮರಸ್ (ಕೈ ಮೂಳೆ) ಅವ್ಯಾಸ್ಕುಲಾರ್ ನೆಕ್ರೋಸಿಸ್ ಎಂಬ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಡಾ.ಸಂತೋಷ ಮರೆದ, ಡಾ.ಅರುಣ ಡಾಂಗಿ, ಡಾ.ಪ್ರಕಾಶ ವಾಲಿ ಹಾಗೂ ಡಾ.ಎಂ.ಎನ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞರ ತಂಡ, ಶುಶ್ರೂಷಾಧಿಕಾರಿಗಳ ತಂಡ ಯಶಸ್ವಿಯಾಗಿ ನೆರವೇರಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಬಿಮ್ಸ್ ಆಸ್ಪತ್ರೆಯ ಎಲುವು ಮತ್ತು ಕೀಲುಗಳ ವಿಭಾಗದಲ್ಲಿ ಪ್ರಾಕ್ಸಿಮಲ್ ಹ್ಯೂಮರಸ್ (ಕೈ ಮೂಳೆ) ಅವ್ಯಾಸ್ಕುಲಾರ್ ನೆಕ್ರೋಸಿಸ್ ಎಂಬ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಡಾ.ಸಂತೋಷ ಮರೆದ, ಡಾ.ಅರುಣ ಡಾಂಗಿ, ಡಾ.ಪ್ರಕಾಶ ವಾಲಿ ಹಾಗೂ ಡಾ.ಎಂ.ಎನ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞರ ತಂಡ, ಶುಶ್ರೂಷಾಧಿಕಾರಿಗಳ ತಂಡ ಯಶಸ್ವಿಯಾಗಿ ನೆರವೇರಿಸಿದೆ.

ಬಿಮ್ಸ್ ಜಿಲ್ಲಾ (ಬೋಧಕ) ಆಸ್ಪತ್ರೆಯ ಎಲುವು ಮತ್ತು ಕೀಲುಗಳ ವಿಭಾಗದಲ್ಲಿ 38 ವರ್ಷದ ವ್ಯಕ್ತಿ ಒಂದು ವರ್ಷಗಳ ಹಿಂದೆ ಜಾರಿ ಬಿದ್ದು ಗಾಯಗೊಂಡಿದ್ದ. ಪ್ರಾಕ್ಸಿಮಲ್ ಹ್ಯೂಮರಸ್ (ಕೈ ಮೂಳೆ) ಮುರಿತಕ್ಕೆ ಶಸ್ತ್ರ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ ನಾಲ್ಕು ತಿಂಗಳ ನಂತರ ಭಾರಿ ನೋವಿನಿಂದ ಬಳಲುತ್ತಿದ್ದರು. ಹಲವು ಖಾಸಗಿ ಅಸ್ಪತ್ರೆಗಳ ವೈದ್ಯರಲ್ಲಿ ತೋರಿಸಿದಾಗ ಇದು ಪ್ರಾಕ್ಸಿಮಲ್ ಹ್ಯೂಮರಸ್ ಅವ್ಯಾಸ್ಕುಲಾರ್ ನೆಕ್ರೋಸಿಸ್ ರೋಗ ಎಂಬ ನಿರ್ಣಯ ಬಂದು, ಶಸ್ತ್ರ ಚಿಕಿತ್ಸೆ ಅಗತ್ಯ, ಶಸ್ತ್ರಚಿಕಿತ್ಸೆಗೆ ಕನಿಷ್ಠ ₹3 ರಿಂದ 4ಲಕ್ಷ ವೆಚ್ಚ ತಗಲುಲಿದೆ ಎಂದು ಹೇಳುತ್ತಾರೆ. ಹಣಕಾಸಿನ ತೊಂದರೆ ಇರುವ ಕಾರಣದಿಂದ ರೋಗಿಯು ಬಿಮ್ಸ್ ಆಸ್ಪತ್ರೆಯ ಎಲುವು ಮತ್ತು ಕೀಲುಗಳ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾದಾಗ ಹಿರಿಯ ವೈದ್ಯರು ಹಾಗೂ ತಂಡ ಮತ್ತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ತಂಡಕ್ಕೆ ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ, ವ್ಯದ್ಯಕೀಯ ಅಧೀಕ್ಷಕ ಡಾ.ಈರಣ್ಣ ಪಲ್ಲೆದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಠ್ಠಲ ಶಿಂಧೆ ಹಾಗೂ ಸ್ಥಳೀಯ ವೈದ್ಯಾಧಿಕಾರಿ ಡಾ.ಸರೋಜ ತಿಗಡಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.