ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ: ಕಾವ್ಯಾರಾಣಿ

| Published : Apr 05 2024, 01:00 AM IST

ಸಾರಾಂಶ

ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲು ತಾಲೂಕು ಪಂಚಾತ್ ಅಧಿಕಾರಿ ಬಸವರಾಜ ಸಜ್ಜನ್, ಡಿವೈಎಸ್‌ಪಿ ಜಾವೀದ್ ಇನಾಮದಾರ್, ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬಂಡೊಳ್ಳಿ, ನಾರಾಯಣಪುರ, ಮಾಳನೂರ, ಹಗರಟಗಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಯಚೂರು ಲೋಕಸಭಾ ಮತ್ತು ಸುರಪುರ ಉಪ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡು ಸಜ್ಜಾಗಿದೆ ಎಂದು ಚುನಾವಣಾಧಿಕಾರಿ ಕಾವ್ಯಾರಾಣಿ ಕೆ.ವಿ. ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಏ.19ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನ, ಏ.20ರಿಂದ ನಾಮಪತ್ರ ಪರಿಶೀಲನೆ, ಮೇ 7ರಂದು ಮತದಾನ ನಡೆಯಲಿದೆ. ಜೂ.4ರಂದು ಮತ

ಎಣಿಕೆ ನಡೆಯಲಿದೆ ಎಂದರು.

ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲು ತಾಲೂಕು ಪಂಚಾತ್ ಅಧಿಕಾರಿ ಬಸವರಾಜ ಸಜ್ಜನ್, ಡಿವೈಎಸ್‌ಪಿ ಜಾವೀದ್ ಇನಾಮದಾರ್, ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬಂಡೊಳ್ಳಿ, ನಾರಾಯಣಪುರ, ಮಾಳನೂರ, ಹಗರಟಗಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಚುನಾವಣೆ ವೆಚ್ಚ ಗಮನಿಸಲು ಫ್ಲೇಯಿಂಗ್ ಸ್ಕ್ಯಾಡ್, ಸ್ಟಾಟಿಕ್ ಸರ್ವಲೆನ್ಸ್ಟೀಮ್-12, ವಿಡಿಯೋ ಸರ್ವಲೆನ್ಸ್-5, ವಿಡಿಯೋ ವಿವಿಂಗ್ ಟೀಂ-1, ಸೆಕ್ಟರ್ ಆಫಿರ‍್ಸ್-22, ಅಕೌಂಟಿಂಗ್ ಟೀಂ-6 ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಪ್ರಚಾರ ಸಭೆ, ಸಮಾರಂಭ, ರ‍್ಯಾಲಿ ಮುಂತಾದವುಗಳನ್ನು ನಡೆಸಲು 24 ಗಂಟೆಗಳ ಮುಂಚಿತವಾಗಿ ಸಹಾಯಕ ಚುನಾವಣಾಧಿಕಾರಗಿಳ ಕಚೇರಿಯಿಂದ ಅನುಮತಿ ಪಡೆಯಬೆಕು. ಪ್ರಚಾರಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ಉಪಯೋಗಿಸುವಂತಿಲ್ಲ. ಧರ್ಮ, ಜಾತಿ ಆಧಾರದ ಮೇಲೆ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ಆಮಿಷ ಒಡ್ಡುವಂತಿಲ್ಲ. ಸರಕಾರಿ ನೌಕರರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.

ಮತಕ್ಷೇತ್ರದಲ್ಲಿ 317 ಮತಗಟ್ಟೆಗಳು, 1,41,858 ಪುರುಷರು, 1,39,983 ಮಹಿಳೆಯರು, ಇತರೆ-2,81,869 ಮತದಾರರಿದ್ದಾರೆ. ಯುವ ಮತದಾರರು 6265, ವಿಕಲಚೇತನರು-3798, 85 ವರ್ಷ ಮೇಲ್ಪಟ್ಟವರು 2381 ಸದಸ್ಯರಾಗಿದ್ದಾರೆ. ಸಾರ್ವತ್ರಿಕ ಚುನಾವಣೆ ಸಂಬಂಧಿತ ಎಲ್ಲ ರೀತಿಯ ದೂರುಗಳನ್ನು ಸಲ್ಲಿಸಲು ತಹಸೀಲ್ದಾರ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಈ ದೂರವಾಣಿಗೆ ಕರೆ ಮಾಡಿ ದೂರುಗಳನ್ನು ಸಲ್ಲಿಸಬಹುದು ಎಂದರು.

ಭಾರತ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ನಿಗಾವಹಿಸಲು ಸಿ-ವಿಜಿಲ್ ಮೊಬೈಲ್ ಆ್ಯಪ್‌ನ್ನು ಪರಿಚಯಿಸಿದೆ. ಮತದಾರರ ಮೊಬೈಲ್‌ನಲ್ಲಿ ಆಪ್ ನ್ನು ಡೌನ್‌ಲೋಡ್ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಈ ಮೂಲಕ ದೂರುಗಳನ್ನು ದಾಖಲಿಸಬಹುದಾಗಿದೆ. ಮತದಾರರಿಗೆ ವೋಟರ್ ಸ್ಲಿಪ್ಸ್ ಮತ್ತು ವೋಟರ್ ಗೈಡ್‌ಗಳನ್ನು ವಿತರಿಸಲಾಗುವುದು.

78 ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಮತದಾನ ದಿನದಂದು ಮಹಿಳಾ ಸಿಬ್ಬಂದಿಗಳನ್ನು ಮಾತ್ರ ಒಳಗೊಂಡ ಸಖಿ ಮತಗಟ್ಟೆಯನ್ನು ಮತ್ತು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಸಹಾಯಕ ಚುನಾವಣಾಧಿಕಾರಿ ನಾಗಮ್ಮ ಕಟ್ಟಿಮನಿ, ಸಿಪಿಐಗಳಾದ ಆನಂದ ವಾಗ್ಮೋಡೆ, ಸಚಿನ್ ಛಲವಾದಿ, ಚುನಾವಣೆ ವಿಭಾಗದ ಶಿರಸ್ತೇದಾರ ಅವಿನಾಶ್, ಕಾರ್ತಿಕ್, ರವಿಕುಮಾರ, ಭೀಮು ಯಾದವ ಸೇರಿದಂತೆ ಇತರರಿದ್ದರು.