ಕಾಯಕದ ಜೊತೆಗೆ ಸನ್ಮಾರ್ಗದಲ್ಲಿ ನಡೆದ ಶರಣರು: ಬಸವರಾಜ ಶರಣರು

| Published : Apr 05 2024, 01:06 AM IST

ಸಾರಾಂಶ

ಹಿಂದಿನ ಸಂತರು, ಶರಣರು ಕಾಯಕದ ಜೊತೆಗೆ ಸನ್ಮಾರ್ಗದಲ್ಲಿ ನಡೆದರು. ಪರೋಪಕಾರ ಪುಣ್ಯಮಯ ಕಾರ್ಯ ಮಾಡಿ ಶರಣರ ನಾಡ ಕಟ್ಟಿದವರು ಎಂದು ಹಣ್ಣಿಕೇರಿಯ ಪ್ರವಚನಕಾರ ಬಸವರಾಜ ಶರಣರು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಹಿಂದಿನ ಸಂತರು, ಶರಣರು ಕಾಯಕದ ಜೊತೆಗೆ ಸನ್ಮಾರ್ಗದಲ್ಲಿ ನಡೆದರು. ಪರೋಪಕಾರ ಪುಣ್ಯಮಯ ಕಾರ್ಯ ಮಾಡಿ ಶರಣರ ನಾಡ ಕಟ್ಟಿದವರು ಎಂದು ಹಣ್ಣಿಕೇರಿಯ ಪ್ರವಚನಕಾರ ಬಸವರಾಜ ಶರಣರು ಹೇಳಿದರು.

ತಾಲೂಕಿನ ಧುಳಗನವಾಡಿ ಗ್ರಾಮದಲ್ಲಿ 59ನೇ ಕಲ್ಯಾಣ ಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಐದು ದಿನಗಳವರೆಗೆ ಆಯೋಜಿಸಿದ್ದ ಶರಣರ ದರ್ಶನ ಪ್ರವಚನದಲ್ಲಿ ಮಾತನಾಡಿ, ಆಧ್ಯಾತ್ಮಿಕ ದಾರಿದೀಪದಲ್ಲಿ ನಾವೆಲ್ಲರೂ ಸೇರಿ ಜೀವನ ಪಾವನ ಮಾಡಿಳ್ಳಬೇಕೆಂದರು.

ಚಿಂಚಣಿ-ಮಜಲಟ್ಟಿ ಗ್ರಾಮದ ಕಲ್ಮೇಶ್ವರ, ಅಲ್ಲಮಪ್ರಭು ಮಂದಿರದ ಸದ್ಗುರು ಬಸವಪ್ರಭು ಮಹಾರಾಜರು ಕಲ್ಯಾಣಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಕ್ತಿ ಎನ್ನುವುದು ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು ಇರುವ ಸರಳ ಸಾಧನ. ಪರಮಾನಂದ ಪ್ರಾಪ್ತಿ ಪಡೆಯಲು ಪ್ರಪಂಚದ ಜೊತೆ ಪಾರಮಾರ್ಥದಲ್ಲಿ ಬೆರೆತು ಅಂತರಂಗದ ಶುದ್ಧಿಗೆ ಸತ್ಸಂಗದಲ್ಲಿ ಬೆರೆತು ಪಾವನರಾಗಬೇಕೆಂದು ಹೇಳಿದರು.

ಚನ್ನಮಲ್ಲಯ್ಯ ಮಠಪತಿ, ಸುರೇಶ ಕಮತೆ, ಶಿವಕುಮಾರ ಕಮತೆ, ಮಲ್ಲೇಶ ಚಿಮನೆ, ಸಿದ್ದಗೌಡ ಕಮತೆ, ಚೇತನ ಮಗದುಮ್ಮ, ರಾವಸಾಬ ಕಮತೆ, ಅಪ್ಪಾಸಾಬ ಕಮತೆ ಉಪಸ್ಥಿತರಿದ್ದರು. ಸ್ಥಳೀಯ ಬಸವೇಶ್ವರ ಭಜನಾ ಮಂಡಳದವರು ಭಜನಾ ಸೇವೆ ನಡೆಸಿಕೊಟ್ಟರು, ಶಿಕ್ಷಕರಾದ ಮಹಾದೇವ ಹಾಲಪ್ಪನವರ ನಿರೂಪಿಸಿ ವಂದಿಸಿದರು.