ಸಾರಾಂಶ
ಯಾರು ಕೂಡ ಸಮಯ ಕಳೆಯದಂತೆ ರೇಷನ್ ಕಾರ್ಡ್ ಹಾಗೂ ಯುಎಚ್‌ಐಡಿನಂತೆ ಎಲ್ಲ ನಾಗರಿಕರು ಸಮೀಕ್ಷೆಯಲ್ಲಿ ಒಳಗೊಳ್ಳುವಂತೆ ಖಚಿತಪಡಿಸಿಕೊಳ್ಳುವುದು ಸಮೀಕ್ಷೆದಾರರ ಕರ್ತವ್ಯವಾಗಿದೆ
ನವಲಗುಂದ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಇನ್ನೂ ಸಮೀಕ್ಷೆಗೆ ಒಳಪಡದೇ ಇರುವ ನಾಗರಿಕರನ್ನು ಕಡ್ಡಾಯವಾಗಿ ಸಮೀಕ್ಷೆ ಮಾಡುವಂತೆ ಧಾರವಾಡ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಮೀಕ್ಷೆ ಕಾರ್ಯದ ನೋಡಲ್ ಅಧಿಕಾರಿ ದೇವರಾಜ್ ಹೇಳಿದರು.
ಅವರು ಶನಿವಾರ ಪಟ್ಟಣದ ಶಿಕ್ಷಕರ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ತಾಲೂಕಿನ ಸಮೀಕ್ಷೆದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಯಾರು ಕೂಡ ಸಮಯ ಕಳೆಯದಂತೆ ರೇಷನ್ ಕಾರ್ಡ್ ಹಾಗೂ ಯುಎಚ್‌ಐಡಿನಂತೆ ಎಲ್ಲ ನಾಗರಿಕರು ಸಮೀಕ್ಷೆಯಲ್ಲಿ ಒಳಗೊಳ್ಳುವಂತೆ ಖಚಿತಪಡಿಸಿಕೊಳ್ಳುವುದು ಸಮೀಕ್ಷೆದಾರರ ಕರ್ತವ್ಯವಾಗಿದೆ ಎಂದರು.
ತಹಸೀಲ್ದಾರ್ ಸುಧೀರ್ ಸಾಹುಕಾರ್ ಮಾತನಾಡಿ, ಸಮೀಕ್ಷೆದಾರರು ಪ್ರತಿ ಮನೆಮನೆಗೆ ಹೋಗಿ ಗಣತಿ ಮಾಡಬೇಕು. ನಿಮಗೆ ಯಾವ ಗ್ರಾಮದಲ್ಲಿ ತೊಂದರೆ ಇದೆಯೋ ಆ ಗ್ರಾಮದ ನ್ಯಾಯ ಬೆಲೆ ಅಂಗಡಿಯವರ ಸಹಾಯ ಪಡೆದು ಗಣತಿ ಕಾರ್ಯ ಮಾಡಿ.ಎಲ್ಲ ಮಾಹಿತಿ ಸರಿಯಾಗಿ ಭರ್ತಿ ಮಾಡಬೇಕು ಎಂದರು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣಾಚಾರಿ, ಬಿ.ಎಸ್. ಪಾಟೀಲ, ಶ್ರೀನಿವಾಸ ಅಮಾತೆಣ್ಣವರ, ಎಸ್.ಎಂ. ಬೆಂಚಿಕೇರಿ, ಗಣೇಶ ಹೊಳೆಯಣ್ಣವರ, ಎಂ.ಎನ್. ವಗ್ಗರ, ಎಲ್.ಬಿ. ಕಮತ ಸೇರಿದಂತೆ ನೂರಾರು ಸಮೀಕ್ಷೆದಾರರು, ಮೇಲ್ವಿಚಾರಕರು, ಮಾಸ್ಟರ್ ಟ್ರೇನರ್‌ಗಳು ಉಪಸ್ಥಿತರಿದ್ದರು.