ಸಾಮಾಜಿಕ ಶೈಕ್ಷಣಿಕ ಅರ್ಥಿಕ ಸ್ಥಿತಿ ಅರಿಯಲು ಸಮೀಕ್ಷೆ ಅತ್ಯವಶ್ಯಕ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Oct 05 2025, 01:00 AM IST

ಸಾಮಾಜಿಕ ಶೈಕ್ಷಣಿಕ ಅರ್ಥಿಕ ಸ್ಥಿತಿ ಅರಿಯಲು ಸಮೀಕ್ಷೆ ಅತ್ಯವಶ್ಯಕ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಎಲ್ಲರ ಅಭಿವೃದ್ಧಿಗಾಗಿ ಜನರ ಸಾಮಾಜಿಕ ಶೈಕ್ಷಣಿಕ ಅರ್ಥಿಕ ಸ್ಥಿತಿ ಅರಿಯಲು ಸರ್ಕಾರ ಕೈಗೊಂಡಿರುವ ಗಣತಿ ಕಾರ್ಯ ಅತ್ಯಂತ ಅವಶ್ಯಕವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

- ವಾರ್ಡ್ 17ರಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಎಲ್ಲರ ಅಭಿವೃದ್ಧಿಗಾಗಿ ಜನರ ಸಾಮಾಜಿಕ ಶೈಕ್ಷಣಿಕ ಅರ್ಥಿಕ ಸ್ಥಿತಿ ಅರಿಯಲು ಸರ್ಕಾರ ಕೈಗೊಂಡಿರುವ ಗಣತಿ ಕಾರ್ಯ ಅತ್ಯಂತ ಅವಶ್ಯಕವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಶನಿವಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಖಾಜಿ ಬೀದಿ ಜಾಮೀಯ ಮಸೀದಿ ಅವರಣದಲ್ಲಿ ನಡೆದ ತರೀಕೆರೆ ವಾರ್ಡ್ ನಂ.17ನ ₹17 ಲಕ್ಷ ವೆಚ್ಚದ ಖಾಜಿ ಬೀದಿಯಿಂದ ಹಜರತ್ ಸಲಾವುದ್ದೀನ್ ಷಾ ಖಾದ್ರಿ ದರ್ಗಾವರೆಗೆ .ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, ಮತ್ತು ಈದ್ ಮಿಲಾದ್ ಅಂಗವಾಗಿ ಶಂಕರ ಕಣ್ಣಿನ ಆಸ್ಪತ್ರೆ ಯಿಂದ ಉಚಿತ

ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿಂದುಳಿದವರ ಮತ್ತು ಎಲ್ಲರ ಅಭಿವೃದ್ಧಿ ಆಗಬೇಕು. ಸಮಾಜ ದೇಶ ಅಭಿವೃದ್ಧಿ ಆಗುತ್ತದೆ ಎನ್ನುವುದು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಆಶಯ. ಅಲ್ಪಸಂಖ್ಯಾತರು ವಾಸಿಸುವ ಎಲ್ಲ ಕಡೆಗಳಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಸರಬ ರಾಜಿಗೆ ಸಿಎಂ ಮತ್ತು ಸಚಿವಜ ಮೀರ್ ಅಹಮದ್ ಪ್ರತ್ಯೇಕವಾಗಿ ಅನುದಾನ ನೀಡಿದ್ದಾರೆ ಎಂದರು.ತಾಲೂಕಿನಾದ್ಯಂತ ಎಲ್ಲ ಕಡೆ ರಸ್ತೆ, ಚರಂಡಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ.ಇದಕ್ಕಾಗಿ ಹೆಚ್ಚು ಅನುದಾನ ತರಲಾಗಿದೆ. ಇದೀಗ ವಾರ್ಡ್ ನಂ.17ರಲ್ಲಿ ಖಾಜಿ ಬೀದಿಯಿಂದ ಹಜರತ್ ಸಲಾವುದ್ದೀನ್ ಷಾ ಖಾದ್ರಿ ದರ್ಗಾವರೆಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಟಿ. ದಾದಾ ಪೀರ್ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ಇತ್ಯಾದಿ ಸಾಮಾಜಿಕ ಕಳಕಳಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಶಾಸಕ ಜಿ.ಎಚ್‌.ಶ್ರೀನಿವಾಸ್ ಖಬರಸ್ಥಾನ ಹಾಗೂ ಅಲ್ಪಸಂಖ್ಯಾತರು ವಾಸಿಸುವ ವಾರ್ಡುಗಳಲ್ಲಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿದ್ದಾರೆ. 17ನೇ ವಾರ್ಡಿನಲ್ಲಿ ಅಂಗನವಾಡಿಗೆ ಪುರಸಭೆ ನಿವೇಶನ ಒದಗಿಸಿದೆ. ಪ್ರವಾದಿಗಳ ಹೆಸರಿನಲ್ಲಿ ಮತ್ತು ಸಂತರಾದ ಹಜ್ರತ್ ಗೌಸುಲ್ ಆಜಂ ದಸ್ತಗೀರ್ ರವರ ಜನ್ಮದಿನಾಚರಣೆ ಪ್ರಯುಕ್ತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ವಿಶೇಷ ಅಬಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಸಾಹಿತಿ ಮತ್ತು ಪುರಸಭಾ ಸದಸ್ಯ ಟಿ.ದಾದಪೀರ್ ಸಮಾಜದ ವಿವಿಧ ಸ್ಥರಗಳ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಸಹಕಾರ ಹಾಗೂ ಪುರಸಭೆ ನಿಧಿಯಲ್ಲಿ ಕೈಗೊಳ್ಳಲಾಗಿದೆ. ನಾಗರಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಪುರಸಭೆ ಆಡಳಿತ ಬದ್ಧವಾಗಿದೆ ಎಂದು ಹೇಳಿದರು.

ಪುರಸಭಾ ಸದಸ್ಯ ಆದಿಲ್ ಪಾಷಾ, ಅಬ್ಬಾಸ್, ಟಿ.ಜಿ.ಮಂಜುನಾಥ್, ಟಿ.ಡಿ.ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ತಾಪಂ ಮಾಜಿ ಸದಸ್ಯ ಅಸ್ಲಾಂಖಾನ್, ಟಿ.ಜಿ.ಸದಾನಂದ್, ಕೆಡಿಪಿ ಸದಸ್ಯ ಪೀರಾನ್ ಸಾಬ್, ಪುರಸಭೆ ಮಾಜಿ ಸದಸ್ಯ ಜಿಯಾ ಉಲ್ಲಾ, ಜಾಮೀಯ ಮಸೀದಿ ಅಧ್ಯಕ್ಷ ಅಮ್ಜದ್ ಪಾಷಾ,. ಇರ್ಪಾನ್, ವಿವಿಧ ಮಸೀದಿ

ಮುಖಂಡರು ಹಾಗೂ ಧರ್ಮಗುರು ಉಪಸ್ಥಿತರಿದ್ದರು.4ಕೆಟಿಆರ್.ಕೆ.1ಃ

ತರೀಕೆರೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಸದಸ್ಯ ಟಿ.ದಾದಾಪೀರ್, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮತ್ತಿತರರು ಇದ್ದರು.