ಸಾರಾಂಶ
ಇಳಕಲ್ಲ: ನಗರದ ಗಾಯತ್ರಿ ಮಹಿಳಾ ಸಂಘದ ಕನ್ನಡ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ ಆಚರಿಸಲಾಯಿತು. ಸ್ವಾಮಿ ವಿವೇಕಾನಂದ ಜೀವನ ಸಾಧನೆ ಕುರಿತಾದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕರಾದ ಮಂಜುನಾಥ ಕನ್ನೂರ ವಂದಿಸಿದರು. ಶಿಕ್ಷಕಿ ವೇದಾವತಿ ದಟ್ಟಿ ನಿರೂಪಿಸಿದರು .ಶಿಕ್ಷಕರಾದ ಅಂಬಣ್ಣ ಯರಗೇರಿ ಶಿಕ್ಷಕಿಯರಾದ ಮಾಲಾ ಕೊಳದೂರ, ಲಕ್ಷ್ಮೀ ಪುರೋಹಿತ, ಕಾಮಾಕ್ಷಿ ಹೂಲಗೇರಿ, ಚೌಡಮ್ಮ ಮೆದಿಕೇರಿ, ಸಿದ್ದಮ್ಮ ಜೋಗಿನ, ಶ್ರುತಿ ಪರದೇಸಿ, ಸುನಿತಾ ಮಸ್ಕಿ ಹಾಗೂ ಸಿಬ್ಬಂದಿ ಮತ್ತು ಪಾಲಕರು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ನಾವೆಲ್ಲರೂ ಅವನ್ನು ಪಾಲಿಸಬೇಕು. ಅವರ ಜನ್ಮ ದಿನವನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಅವನ್ನು ಕಾರ್ಯರೂಪಕ್ಕೆ ತಂದರೆ ನಾವೆಲ್ಲ ನಮ್ಮ ಕರ್ತವ್ಯ ಮಾಡಿದಂತೆ. ಭಾರತ ಮತ್ತು ಹಿಂದೂ ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಿ ಹೇಳಿದ ಮಹಾನ್ ದಾರ್ಶನಿಕ ಎಂದು ಎಂದು ಕುಮಾರಿ ಶರಣ್ಯ ಅಂಗಡಿ ಅಭಿಪ್ರಾಯಪಟ್ಟಳು.ನಗರದ ಗಾಯತ್ರಿ ಮಹಿಳಾ ಸಂಘದ ಕನ್ನಡ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದಳು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಡಳಿತಾಧಿಕಾರಿ ಟಿ.ಎಂ.ರಾಮದುರ್ಗ, ದೇಶ ಕಂಡ ಶ್ರೇಷ್ಠ ಸಂತ, ಸನ್ಯಾಸಿ ಭಾರತ ಬೆಳಗಿದ ಚೇತನ ಎಂದು ಅಭಿಪ್ರಾಯಪಟ್ಟರು. ಮುಖ್ಯಗುರು ಮಲ್ಲಿಕಾರ್ಜುನ ಇಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಸ್ವಾಮಿ ವಿವೇಕಾನಂದ ಜೀವನ ಸಾಧನೆ ಕುರಿತಾದ ಪುಸ್ತಕ ಪ್ರದರ್ಶನ ಏರ್ಪಡಿಸಲಾಯಿತು.
ಶಿಕ್ಷಕರಾದ ಮಂಜುನಾಥ ಕನ್ನೂರ ವಂದಿಸಿದರು. ಶಿಕ್ಷಕಿ ವೇದಾವತಿ ದಟ್ಟಿ ನಿರೂಪಿಸಿದರು .ಶಿಕ್ಷಕರಾದ ಅಂಬಣ್ಣ ಯರಗೇರಿ ಶಿಕ್ಷಕಿಯರಾದ ಮಾಲಾ ಕೊಳದೂರ, ಲಕ್ಷ್ಮೀ ಪುರೋಹಿತ, ಕಾಮಾಕ್ಷಿ ಹೂಲಗೇರಿ, ಚೌಡಮ್ಮ ಮೆದಿಕೇರಿ, ಸಿದ್ದಮ್ಮ ಜೋಗಿನ, ಶ್ರುತಿ ಪರದೇಸಿ, ಸುನಿತಾ ಮಸ್ಕಿ ಹಾಗೂ ಸಿಬ್ಬಂದಿ ಮತ್ತು ಪಾಲಕರು ಹಾಜರಿದ್ದರು.