ಡಾ.ಕೆ.ವಿ.ಸಿದ್ದರಾಜುಗೆ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

| Published : Jan 20 2025, 01:34 AM IST

ಸಾರಾಂಶ

ದಾಬಸ್‍ಪೇಟೆ: ಭಾರತೀಯ ರೈಲ್ವೆ ಬೋರ್ಡ್ ನಿವೃತ್ತ ನಿರ್ದೇಶಕ ಡಾ.ಕೆ.ವಿ.ಸಿದ್ದರಾಜುಗೆ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಾಬಸ್‍ಪೇಟೆ: ಭಾರತೀಯ ರೈಲ್ವೆ ಬೋರ್ಡ್ ನಿವೃತ್ತ ನಿರ್ದೇಶಕ ಡಾ.ಕೆ.ವಿ.ಸಿದ್ದರಾಜುಗೆ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತು, ಸ್ನೇಹಜೀವಿ ಫೌಂಡೇಶನ್, ಮುಂಬೈ-ಕರ್ನಾಟಕ ಹಾಗೂ ಅಕ್ಷರ ದೀಪ ಫೌಂಡೇಶನ್, ಸ್ವಾತಂತ್ರ್ಯ ಯೋಧ ಚನ್ನಪ್ಪ ಯರಗಾವಿ ಪ್ರತಿಷ್ಠಾನ ಸಹಯೋಗದಲ್ಲಿ 14 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವೆ, ಜನಸೇವೆ ಮತ್ತು ಬಡವರ ಪರ ಶ್ರಮಿಸಿದ ಹೋರಾಟದ ಫಲವಾಗಿ ಪ್ರಶಸ್ತಿಗೆ ಗುರುತಿಸಲಾಗಿದೆ. ಹಿಂದುಳಿದ ವರ್ಗಗಳ ಸಮುದಾಯದ ಹೋರಾಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ನಂತರ ಡಾ.ಕೆ.ವಿ.ಸಿದ್ದರಾಜು ಮಾತನಾಡಿ, ವಿದ್ಯಾಕಾಶಿ ಮತ್ತು ಹಲವಾರು ಕವಿಗಳ ತವರೂರು ಧಾರವಾಡದ ವಿವೇಕೋತ್ಸವದಲ್ಲಿ, ಪ್ರಶಸ್ತಿ ಪಡೆದಿರುವುದು ಅತೀವ ಸಂತಸವಾಗಿದೆ. ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪೋಟೋ 5 : ಭಾರತೀಯ ರೈಲ್ವೆ ಬೋರ್ಡ್ ನಿವೃತ್ತ ನಿರ್ದೇಶಕ ಡಾ.ಕೆ.ವಿ.ಸಿದ್ದರಾಜು ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.