ಸ್ವಾಮಿ ವಿವೇಕಾನಂದರ ಪೋಷಾಕು ಧರಿಸಿ ಜನ್ಮದಿನಾಚರಣೆ

| Published : Jan 13 2024, 01:33 AM IST

ಸಾರಾಂಶ

ಮಹಾಲಿಂಗಪುರ: ಸ್ಥಳೀಯ ಪ್ರಗತಿ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದರ ಪೋಷಾಕುಗಳನ್ನು ಧರಿಸಿ ಶಾಲೆಗೆ ಆಗಮಿಸಿದ ಕೆಲವು ಮಕ್ಕಳು ವಿವೇಕಾನಂದರ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು. ಶುಕ್ರವಾರ ಬೆಳಗ್ಗೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ, ಪ್ರಗತಿ ಶಾಲೆಯ ಮಕ್ಕಳು ತಾವು ವಿದ್ಯಾಭ್ಯಾಸ ಮಾಡುವ ಶಾಲೆಗೆ ಕಾವಿ ಬಣ್ಣದ ಪೋಷಾಕುಗಳನ್ನು ಧರಿಸಿಕೊಂಡು, ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳೊಂದಿಗೆ ವಿವೇಕಾನಂದರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಮಿ ವಿವೇಕಾನಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಎಲ್‌ಕೆಜಿ, ಯುಕೆಜಿ ಅಲ್ಲದೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವೇಷಭೂಷಣ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮುಖ್ಯ ಗುರುಗಳಾದ ಮಹಾಲಿಂಗಯ್ಯ ಮಠ, ಶಿಕ್ಷಕಿಯರಾದ ಡಿ.ಜಿ.ದೇಸಾಯಿ, ಪಿ.ಎಂ.ಕರಿಜಾಡರ್, ಸವಿತಾ ಹುನಿಶ್ಯಾಳ, ಎ.ಎಸ್. ಪಾಟೀಲ್, ಜಿ.ಬಿ.ಹಿರೇಮಠ, ಎಸ್.ಆರ್.ಅತ್ತಿಮರದ ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.