ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯ ಯುವ ಸಂಘಗಳ ಒಕ್ಕೂಟದಿಂದ 2024-25ನೇ ಸಾಲಿನ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದರ ಸದ್ಭಾವನಾ ಪ್ರಶಸ್ತಿಗೆ ಸಮಾರಂಭ ಫೆಬ್ರವರಿ 5 ರಂದು ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವೇಳೆ 38 ಸಾಧಕರು, 3 ಸಂಘ ಸಂಸ್ಥೆಗಳನ್ನು ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 5 ಬೇರೆ ಬೇರೆ ರಾಜ್ಯಗಳು, ಕರ್ನಾಟಕದ 10 ಸೇರಿ ಒಟ್ಟು 15 ಸಾಧಕರಿಗೆ ರಾಷ್ಟ್ರೀಯ ಮತ್ತು 23 ಸಾಧಕರು, 3 ಸಾಂಘಿಕ ಸೇರಿ 26 ಸಾಧಕರಿಗೆ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.ರಾಷ್ಟ್ರೀಯ ಪ್ರಶಸ್ತಿ: ಮಧ್ಯಪ್ರದೇಶದ ಜಾರ್ಖಂಡ್‌ದ ಮುಕೇಶ್ ಠಾಕೂರ, ಮಹಾರಾಷ್ಟ್ರದ ವಿಜಯ್ ಮಾನೆ, ಆಂಧ್ರ ಪ್ರದೇಶದ ಸಾದರ ನರೇಶಕುಮಾರ, ಕರ್ನಾಟಕದ ಕಲಬುರಗಿಯ ಡಾ.ಸೋಮಶೇಖರ, ರಾಮನಗರದ ಡಾ.ರಾಜು ಗುಂಡಾಪುರ, ಬೆಂಗಳೂರು ನಗರದ ಡಾ.ಶುಭ ನಂದೀಶ, ಕೋಲಾರದ ರಾಕೇಶ, ಬೆಂಗಳೂರು ಗ್ರಾಮಾಂತರದ ಪ್ರೊ.ಅಂಬಿಕಾ, ಸ್ವಾಮಿ ವಿವೇಕಾನಂದ ಎ.ಆರ್, ಮಂಡ್ಯದ ಪ್ರೊ.ಮನೋಜ್.ಎಂ ಇವರು ರಾಷ್ಟ್ರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸದ್ಭಾವನಾ ಸಾಂಘಿಕ ಪ್ರಶಸ್ತಿ: ಹಾವೇರಿಯ ಡಾ.ಕೆ.ಸಿ.ನಾಗರಜ್ಜಿ, ಕೊಪ್ಪಳದ ಪ್ರೇರಣಾ, ಚಿಕ್ಕಮಗಳೂರನ ಶ್ರೀ ಚಂಡಿಕೇಶ್ವರಿ ಪ್ರಮೋದ ಕುಲಕರ್ಣಿ ಅವರು ಸ್ವಾಮಿ ಅಂಟಿಗೆ ಪಿಂಟಿಗೆ ತಂಡ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಹಸಿರು ತೋರಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಾನಪದ ಪ್ರಶಸ್ತಿಗೆ ಬೆಂಗಳೂರು ನಗರ ಜಿಲ್ಲೆಯ ಕಡಬಿಗೆರೆ ಮುನಿರಾಜು, ಸ್ವಾಮಿ ಯುವ ಜಾನಪದ ಶ್ರೀ ಪ್ರಶಸ್ತಿಗೆ ಬಿ.ಸಿ.ಗಂಗಣ್ಣ ಆಯ್ಕೆಯಾಗಿದ್ದಾರೆ.ರಾಜ್ಯ ಪ್ರಶಸ್ತಿ: ಮೈಸೂರಿನ ಪ್ರೊ. ಆರ್.ಎಂ.ಡಾ.ಸಂತೋಷಕುಮಾರ, ಎಚ್.ಆರ್.ವೆಂಕಟೇಶ, ರಾಯಚೂರಿನ ತಾಯಪ್ಪ ಹೊಸೂರ, ದಕ್ಷಿಣ ಕನ್ನಡದ ಶ್ರೀಕಾಂತ ಪೂಜಾರಿ ಬಿರಾವು, ಉತ್ತರ ಕನ್ನಡದ ನಾಗರಾಜ ನಾಯಕ, ವಿಜಯಪುರದ ಮಹೇಂದ್ರ ಜಾಧವ, ಬಾಗಲಕೋಟದ ರಾಜಅಹ್ಮದ ನಬೀವಾಲೆ, ದಾವಣಗೆರೆಯ ಜಿ.ಎಸ್.ಷಡಕ್ಷರಪ್ಪ, ಕೊಡಗಿನ ಕೆ.ಎಸ್.ಮೂರ್ತಿ, ಬೆಳಗಾವಿಯ ನಾಗೇಂದ್ರ ಚೌಗಲಾ, ಚಿಕ್ಕಮಗಳೂರಿನ ಓಣಿತೋಟ ರತ್ನಾಕರ್, ಧಾರವಾಡದ ಈರಪ್ಪ ಎಮ್ಮೆ, ಉಡುಪಿಯ ಡಾ.ಗಣೇಶ ಗಂಗೊಳ್ಳಿ, ಬೀದರನ ರಾಘವೇಂದ್ರ, ತುಮಕೂರಿನ ನರಸಿಂಹಮೂರ್ತಿ.ಆರ್, ಗದಗನ ವಸಂತ ಮಣ್ಣೂರ, ಶಿವಮೊಗ್ಗದ ಡಾ.ರಾಜು ನಾಯ್ಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಒಕ್ಕೂಟದ ಬಾಗಲಕೋಟ ಜಿಲ್ಲಾಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ, ಗೌರವಾಧ್ಯಕ್ಷ ಅಶೋಕ ನಾಡಗೌಡ, ಅಧ್ಯಕ್ಷ ವೀರೇಶ ಗುರುಮಠ, ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜುಗೌಡ ತುಂಬಗಿ, ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕಾಳೆ, ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಗಾಯಕಿ ದೀಪ ರತ್ನಶ್ರೀ, ಸದಸ್ಯರಾದ ಈರಮ್ಮ, ಮಹಾದೇವಿ ಹಿರೇಮಠ, ವಕೀಲ ಮಹಾಂತಗೌಡ ಬಿರಾದಾರ.ಕೃಷ್ಣ ಕುಂಬಾರ ಸೇರಿದಂತೆ ಹಲವರು ಇದ್ದರು