ಫೆ. 22 ರಿಂದ ಮಾ.1ರವರೆಗೆ ಶ್ರೀ ವನಕಲ್ಲು ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಡಾ. ಶ್ರೀ ಬಸವ ರಮಾನಂದ ಸ್ವಾಮಿಜಿಯವರು ಗುಬ್ಬಿ ತಾಲೂಕಿಗೆ ಭಿಕ್ಷಾಟಣೆಗೆ ಬರುತ್ತಿದ್ದು ಎಲ್ಲಾ ಕಾಡುಗೊಲ್ಲ ಸಮುದಾಯದವರು ಸ್ವಾಮೀಜಿ ಅವರ ಜೊತೆ ಪಾಲ್ಗೊಳ್ಳಬೇಕೆಂದು ಕಾಡುಗೊಲ್ಲದ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಫೆ. 22 ರಿಂದ ಮಾ.1ರವರೆಗೆ ಶ್ರೀ ವನಕಲ್ಲು ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಡಾ. ಶ್ರೀ ಬಸವ ರಮಾನಂದ ಸ್ವಾಮಿಜಿಯವರು ಗುಬ್ಬಿ ತಾಲೂಕಿಗೆ ಭಿಕ್ಷಾಟಣೆಗೆ ಬರುತ್ತಿದ್ದು ಎಲ್ಲಾ ಕಾಡುಗೊಲ್ಲ ಸಮುದಾಯದವರು ಸ್ವಾಮೀಜಿ ಅವರ ಜೊತೆ ಪಾಲ್ಗೊಳ್ಳಬೇಕೆಂದು ಕಾಡುಗೊಲ್ಲದ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ತಿಳಿಸಿದರು.ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.25ರಿಂದ ತಾಲೂಕಿನ ಹಾಗಲವಾಡಿ , ಚೇಳೂರು , ನಿಟ್ಟೂರು, ಕಡಬ , ಸಿ ಎಸ್ ಪುರ , ಕಸಬಾ ಹೋಬಳಿಗಳಲ್ಲಿ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿಗಳು ಆಗಮಿಸುತ್ತಿದ್ದು ಸ್ವಾಮೀಜಿಗಳು ಮಠದ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ, ಸಂಸ್ಕೃತ ಪಾಠಶಾಲೆ, ಮಕ್ಕಳಿಗೆ ನಿತ್ಯ ದಾಸೋಹ ನಿಲಯಕ್ಕೆ ದವಸ ಧಾನ್ಯಗಳನ್ನು ನೀಡುವುದರ ಮೂಲಕ ಸಮುದಾಯದ ಮುಖಂಡರು ಸಹಕರಿಸಬೇಕೆಂದು ತಿಳಿಸಿದರು. ಕಾಡುಗೊಲ್ಲ ಸಮುದಾಯ ದಶಕಗಳಿಂದ ಎಸ್ ಟಿ ಮೀಸಲಾತಿಗೆ ಬೇಡಿಕೆ ಇಟ್ಟಿದ್ದು ಇದುವರೆಗೂ ಕೂಡ ಈಡೇರಿಲ್ಲ. ಇತರೆ ಪಕ್ಷಗಳು ಭರವಸೆ ನೀಡಿ ಕಾಡುಗೊಲ್ಲರ ನಂಬಿಕೆಯನ್ನು ಸುಳ್ಳು ಮಾಡಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಮಾಜಿ ಪ್ರಧಾನಿಗಳಾದ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಡುಗೊಲ್ಲರನ್ನು ಎಸ್.ಟಿ. ಮೀಸಲಾತಿಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ. ಅವರಂತೆ ನಮ್ಮ ಸಮುದಾಯ ಕೂಡ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿ ಅಭ್ಯರ್ಥಿಗಳ ಪರವಾಗಿ ಸಹಕಾರ ಕೊಟ್ಟಿದ್ದು ಮೈತ್ರಿ ಅಭ್ಯರ್ಥಿಗಳು ಗೆಲ್ಲಲು ಸಹಕಾರ ನೀಡಿದ್ದಾರೆ ಅದರಂತೆ ನುಡಿದಂತೆ ಕೊಟ್ಟ ಮಾತಿನಂತೆ ದೇವೇಗೌಡರು ಕುಮಾರಸ್ವಾಮಿ ಅವರು ಕಾಡುಗೊಲ್ಲರನ್ನು ಎಸ್.ಟಿ. ಮೀಸಲಾತಿಗೆ ಸೇರಿಸಬೇಕು.ಇಲ್ಲದಿದ್ದಾರೆ ಮುಂದಿನ‌ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ‌ ನೀಡಿದರು.

ವಕೀಲರದ ದೊಡ್ಡಯ್ಯ ಮಾತನಾಡಿ ಕಾಡುಗೊಲ್ಲರನ ಜಾತಿ ಪಟ್ಟಿಗೆ ರಾಜ್ಯ ಸರ್ಕಾರ ಸೇರಿಸಿದ್ದು ಜಾತಿ ಪಟ್ಟಿಗೆ ಸೇರಿದ ಮೇಲೆ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ದ್ಯಾವರನಹಟ್ಟಿ ಜಯಣ್ಣ ಮಾತನಾಡಿ ಸರ್ಕಾರ ಕಾಡುಗೊಲ್ಲ ಜಾತಿ ಆದಾಯ ಪ್ರಮಾಣಪತ್ರ ನೀಡದಿರುವುದಿರಿಂದ ಚುನಾವಣೆ ಸ್ಪರ್ಧಿಸಲು ಅವಕಾಶ ಇಲ್ಲ. ಅಂಥ ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂಬರುವ ಸ್ಥಳೀಯ ಚುನಾವಣೆಗಳಿಗೆ ಕಾಡುಗೊಲ್ಲರನ್ನು ಸ್ಫರ್ಧಿ‌ಮಾಡಲು ಅವಕಾಶವನ್ನು ಕಲ್ಪಿಸಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಇದೇ ಸಂಧರ್ಭದಲ್ಲಿ ಮುಖಂಡರಾದ ತಿಮ್ಮಪ್ಪನಹಟ್ಟಿ ತಿಮ್ಮಯ್ಯ , ಸದಾಶಿವು , ಜಯಣ್ಣ ದ್ಯಾವರನಹಟ್ಟಿ , ಶ್ರೀನಿವಾಸ್ , ಈರಣ್ದ , ನಾಗರಾಜು ಗಂಗಾಧರ್ , ರತೀಶ್ ,ದೇವರಾಜು ನಾಗರಾಜು , ಮಂಜಣ್ಣ , ತಿಮ್ಮರಾಜು ರಾಜನ್ ಪೇಚೆ , ಮೋಹನ್ , ಶಿವಣ್ಣ ಸಮುದಾಯದ ಮುಖಂಡರು ಭಾಗವಹಿಸಿದ್ದರು.