ಅಧರ್ಮಗಳಿಗೆ ಸೋಲು ಖಂಡಿತ ಎಂದ ಬಾಳೆಹೊನ್ನೂರು ಶ್ರೀ

| Published : Nov 23 2024, 12:31 AM IST

ಅಧರ್ಮಗಳಿಗೆ ಸೋಲು ಖಂಡಿತ ಎಂದ ಬಾಳೆಹೊನ್ನೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಿನ ಮಾರ್ಗದರ್ಶನ ಅನುಸರಿಸಿ ಸಂಸ್ಕಾರವಂತರಾಗಿ ಧರ್ಮಾಚರಣೆ ಅನುಸರಣೆಯಿಂದ ಮಾನವನಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಯಾರೂ ಅಧರ್ಮ ಮಾರ್ಗದಲ್ಲಿ ನಡೆಯಬಾರದು. ಅಧರ್ಮಗಳಿಗೆ ಸೋಲು ಖಂಡಿತ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬಸವಾಪಟ್ಟಣ ಗ್ರಾಮದ ವೀರಶೈವ ಸಮಾಜದ ತೊಟ್ಟಿಮನೆ ವಂಶಸ್ಥರ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀಗಂಗಾಧರೇಶ್ವರ ನೂತನ ದೇವಾಲಯ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ನಂತರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಗುರುವಿನ ಮಾರ್ಗದರ್ಶನ ಅನುಸರಿಸಿ ಸಂಸ್ಕಾರವಂತರಾಗಿ ಧರ್ಮಾಚರಣೆ ಅನುಸರಣೆಯಿಂದ ಮಾನವನಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಯಾರೂ ಅಧರ್ಮ ಮಾರ್ಗದಲ್ಲಿ ನಡೆಯಬಾರದು. ಅಧರ್ಮಗಳಿಗೆ ಸೋಲು ಖಂಡಿತ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬಸವಾಪಟ್ಟಣ ಗ್ರಾಮದ ವೀರಶೈವ ಸಮಾಜದ ತೊಟ್ಟಿಮನೆ ವಂಶಸ್ಥರ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀಗಂಗಾಧರೇಶ್ವರ ನೂತನ ದೇವಾಲಯ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ನಂತರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರು ಧರ್ಮ ಅಚರಿಸಬೇಕು. ಎಲ್ಲಾ ಕಾಲಗಳಲ್ಲೂ ಧರ್ಮಕ್ಕೆ ಮಾತ್ರ ಜಯವಾಗಿದೆ ಎಂದರು.

ತೊಟ್ಟಿಮನೆ ವಂಶವೃಕ್ಷ ಪುಸ್ತಕವನ್ನು ವಂಶದ ಪೂರ್ವ ಇತಿಹಾಸ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಇಷ್ಟಲಿಂಗ ಪೂಜೆ ಧಾರ್ಮಿಕ ಸಭೆಯನ್ನು ನಡೆಸಲಾಯಿತು. ನೂತನ ಗಂಗಾಧರೇಶ್ವರ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಯಿತು. ಪೂಜಾದಿ ಕೈಂಕರ್ಯದಲ್ಲಿ ತೊಟ್ಟಿಮನೆ ವಂಶಸ್ಥರು ಭಾಗವಹಿಸಿದ್ದರು.