ಶತಾಯುಷಿ ಮತದಾರರಿಗೆ ಸ್ವೀಪ್‌ ಸಮಿತಿ ಸನ್ಮಾನ

| Published : Apr 09 2024, 12:47 AM IST / Updated: Apr 09 2024, 12:48 AM IST

ಶತಾಯುಷಿ ಮತದಾರರಿಗೆ ಸ್ವೀಪ್‌ ಸಮಿತಿ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿ: ಮತದಾನದಿಂದ ಪ್ರಜ್ಞಾವಂತರೇ ದೂರ ಉಳಿಯುವ ಇಂದಿನ ಸನ್ನಿವೇಶದಲ್ಲಿ ಚಿಕ್ಕೋಡಿ ತಾಲೂಕಿನಲ್ಲಿರುವ ಶತಾಯುಷಿಗಳು ಮತದಾನ ಮಾಡುತ್ತಿರುವುದು ಸ್ಫೂರ್ತಿಯಾಗಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಮತದಾನದಿಂದ ಪ್ರಜ್ಞಾವಂತರೇ ದೂರ ಉಳಿಯುವ ಇಂದಿನ ಸನ್ನಿವೇಶದಲ್ಲಿ ಚಿಕ್ಕೋಡಿ ತಾಲೂಕಿನಲ್ಲಿರುವ ಶತಾಯುಷಿಗಳು ಮತದಾನ ಮಾಡುತ್ತಿರುವುದು ಸ್ಫೂರ್ತಿಯಾಗಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಅಭಿಪ್ರಾಯ ಪಟ್ಟರು.

ತಾಲೂಕಿನ ಮಾಂಜರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಶತಾಯುಷಿ ಮತದಾರರಿಗೆ ಸನ್ಮಾನ ಮಾಡಿ ಮಾತನಾಡಿ, ಮತದಾನ ಎಲ್ಲರ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕೆಂಬ ಉದ್ದೇಶದಿಂದ ಶತಾಯುಷಿಯರಾದ ದಾದು ಬಾವು ಗೋತೆ (102) ಹಾಗೂ ಅಣ್ಣಪ್ಪ ಭರಮು ನರವಾಡೆ(104) ವರ್ಷದ ಶತಾಯುಷಿಗಳು ಒಮ್ಮೆಯು ಮತದಾನ ತಪ್ಪಿಸಿಲ್ಲ. ಈ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ನಿರಂತರವಾಗಿ ಮತದಾನ ಮಾಡುತ್ತ ಬಂದಿದ್ದಾರೆ. ತಾಲೂಕಿನ ಎಲ್ಲಾ ಶತಾಯುಷಿಗಳಿಗೆ ಸನ್ಮಾನದ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಯಾರು ಕೂಡ ಮತದಾನದಿಂದ ಹೊರಗುಳಿಯಬಾರದು ಎಂದು ಸಲಹೆ ನೀಡಿದರು.

ಗ್ರಾಪಂ ಅಭಿವೃದ್ದಿ ಅಧಿಕಾರಿ ವಿ.ಆರ್.ಪೋತದಾರ ಮಾತನಾಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಭಾರಿ ಗ್ರಾಮದಲ್ಲಿ ಶೇ.100 ರಷ್ಟು ಮತದಾನ ಮಾಡುವ ಗುರಿ ಹೊಂದಲಾಗಿದೆ. ಆದ್ದರಿಂದ ಮನೆ ಮನೆಗೆ ಭೇಟಿ ನೀಡಿ ಕರ ಪತ್ರ ಹಂಚಿಕೆ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದರು.

ಸಹಾಯಕ ನಿರ್ದೇಶಕರು (ಗ್ರಾ.ಉ) ಶಿವಾನಂದ ಶಿರಗಾಂವೆ, ವ್ಯವಸ್ಥಾಪಕ ಉದಯಗೌಡಾ ಪಾಟೀಲ, ವಿ.ಡಿ ಕಾಂಬಳೆ, ಗ್ರಾಮ ಆಡಳಿತಾಧಿಕಾರಿ ಮನೋಜ ಕಾಂಬಳೆ, ಐಇಸಿ ಸಂಯೋಜಕ ರಂಜೀತ ಕಾರ್ಣಿಕ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.