ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಮಂಡನೆ । ಇಂದು ಮಂಡನೆಯಾಗಲಿರುವ ಆಯವ್ಯಯಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಬಜೆಟ್ ಮಂಡನೆಯನ್ನು ಫೆ.1 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಲಿದ್ದು, ಕರ್ನಾಟಕದ ಜನೆತೆಗೆ ಸಿಹಿ ಸುದ್ದಿ ನೀಡುವರು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಗುರುವಾರ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಕನಸು ದೇಶವನ್ನು ವಿಶ್ವಗುರು ಹಾಗೂ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಗುರಿಯಿಟ್ಟುಕೊಂಡು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಲಿದ್ದಾರೆ. ಈಗಾಗಲೇ ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಸ್ತೆ. ರೈಲ್ವೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿಗೆ ಕರ್ನಾಟಕಕ್ಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಕಾಲದಲ್ಲಿ ಯೋಜನೆ ಜಾರಿಯಾಗಿದೆ ಎಂಬ ಕಾರಣಕ್ಕಾಗಿ ಸರ್ಕಾರ ದ್ವೇಷದ ರಾಜಕಾರಣ ಮಾಡಿ ಕಾಫಿ ಬೆಳೆಗಾರರಿಗೆ ಅನ್ಯಾಯವಾಗುವ ರೀತಿಯಲ್ಲಿ ವರ್ತನೆ ಮಾಡಿದೆ. ಜಿಲ್ಲಾಧಿಕಾರಿಗಳು ಕಾಫಿ ಬೆಳೆಗಾರರ ಬಳಿಯಲ್ಲಿ ಹಣ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಕೆರಗೊಡು ದೇವಾಲಯ ಕೆಸರಿ ಧ್ವಜ ನಿರ್ಮಾಣ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಳೆದ ೧೫ ವರ್ಷದಿಂದ ಸಣ್ಣ ೨೦ ಅಡಿ ಪೋಲ್‌ನಲ್ಲಿ ಹನುಮ ಧ್ವಜ ಹಾರಟ ಮಾಡಲಾಗಿದೆ. ಗ್ರಾಮಸ್ಥರು ಸ್ವಾತಂತ್ರ ದಿನಾಚರಣೆ ಸಮಯದಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡಿದ್ದಾರೆ. ೨೨ ಹಳ್ಳಿಯ ಜನರು ಹಣ ಸಂಗ್ರಹ ಮಾಡಿ ಕಳೆದ ೨ ತಿಂಗಳಿನಿಂದ ಧ್ವಜದ ಕಂಬ ಸಿದ್ದಪಡಿಸಿದ್ದಾರೆ. ಧ್ವಜ ಕಂಬದ ಉದ್ಘಾಟನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಉದ್ಘಾಟನೆಗೆ ಕರೆಯದ ಕಾರಣ ಸ್ಥಳೀಯ ಶಾಸಕರು ಧ್ವಜ ಹಾರಾಟ ಮಾಡುವುದರಲ್ಲಿ ವಿರೋಧ ಮಾಡಿರುವುದು ಈ ಘಟನೆಗೆ ಕಾರಣವಾಗಿದೆ ಎಂದು ದೂರಿದರು.ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ. ಹನುಮಾನ್ ಧ್ವಜ ತೆಗೆದು ರಾಷ್ಟ್ರಧ್ವಜ ಹಾಕಲು ಯಾವ ಕಾನೂನಿನ ಪುಸ್ತಕದಲ್ಲಿ ಇದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಹನುಮಾನ್ ಧ್ವಜ ತೆಗೆಯಲು ರಾಷ್ಟ್ರಧ್ವಜ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಬಂದ್ ಬೆಂಬಲಕ್ಕೆ ಬಿಜೆಪಿ ವತಿಯಿಂದ ಬೆಂಬಲ ನೀಡುವುದಾಗಿ ತಿಳಿಸಿದರು.
‘ಸಚಿವ ಜಮೀರ್ ಅಹಮದ್ ಕ್ಷೇತ್ರದಲ್ಲಿ ಚಾಮರಾಜಪೇಟೆಯಲ್ಲಿ ಸ್ವಾತಂತ್ರ್ಯ ಬಂದು ೭೫ ವರ್ಷವಾದರು ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಕಂದಾಯ ಸಚಿವನ್ನಾಗಿದ್ದಾಗ ರಾಷ್ಟ್ರಧ್ವಜ ಹಾರಾಟ ಮಾಡಿಸಿದ್ದೇವೆ. ಸಂವಿಧಾನದ ಪ್ರಥಮ ಪ್ರಜೆ ದಲಿತ ಹೆಣ್ಣು ಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ. ಇದು ಕಾಂಗ್ರೆಸ್ ಸಂಸ್ಕೃತಿ. ಇದೇ ಪ್ಲೋನಲ್ಲಿ ಸಿದ್ದರಾಮಯ್ಯ ಸೋನಿಯಾಗಾಂದಿ ಬಗ್ಗೆ ಹೇಳಲಿ, ಸೋನಿಯಾಗಾಂಧಿ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಮೂರು ದಿನದಲ್ಲಿ ಅಧಿಕಾರದಲ್ಲಿ ಇರುವುದಿಲ್ಲ’ ಎಂದರು.ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹಾಗೂ ಮಾಗಡಿ ಶಾಸಕ ಬಾಲಕೃಷ್ಣ ಇಡೀ ದೇಶದಲ್ಲಿ ಕಾಂಗ್ರೆಸ್ ಗೆಲ್ಲಲ ಎನ್ನುವ ಕಾರಣದಿಂದಾಗಿ ಗ್ಯಾರಂಟಿ ವಾಪಸು ಪಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮುಖಂಡರಾದ ವೇಣುಗೋಪಾಲ್, ಕಿರಣ್ ಇತರರು ಹಾಜರಿದ್ದರು.ನಗರದಲ್ಲಿ ಮಾಧ್ಯಮದೊಂದಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿದರು.