ಅಭಿವೃದ್ಧಿಗೆ ಪರ್ಯಾಯ ಹೆಸರು ಕಾಂಗ್ರೆಸ್ ಸಾಕಷ್ಟು ಕನಸುಗಳೊಂದಿಗೆ ಪ್ರಾಧಿಕಾರ ರಚನೆ ಮಾಡಲಾಗಿದ್ದು ಇನ್ನೂ ಮುಂದೆ ಅಭಿವೃದ್ಧಿ ಕಾಮಗಾರಿಗಾಗಿ ಜಿಲ್ಲಾಕೇಂದ್ರಕ್ಕೆ ಎಡತಾಕುವುದು ತಪ್ಪಲಿರುವುದರಿಂದ ಸಾರ್ವಜನಿಕರ ಸಮಯ ಹಾಗೂ ಹಣ ಎರಡು ವ್ಯರ್ಥವಾಗುವುದು ತಪ್ಪಲಿದೆ ಎಂದರು. ಪ್ರಾಧಿಕಾರದ ಸದಸ್ಯರಾಗಿ ಬಿ.ಡಿ ವಿಜಯ್, ಹೊಸಕೊಪ್ಪಲು ಚರಣ್, ಬೈಕೆರೆ ದೇವರಾಜ್ ನೇಮಿಸಲಾಗಿದೆ. ಪದಗ್ರಹಣಕ್ಕೂ ಮುನ್ನ ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿಚಂದ್ರು,ಎಚ್.ಎಚ್ ಉದಯ,ಹೀತುನಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಕಲೇಶಪುರ ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಸಯ್ಯದ್ ಮುಫೀಜ್ ಪದಗ್ರಹಣ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷರಾಗಿರುವ ಸಯ್ಯದ್ ಮುಫೀಜ್ ಇದೇ ಮೊದಲ ಬಾರಿಗೆ ರಚನೆಯಾಗಿರುವ ನಗರ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಪದಗ್ರಹಣ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿ ನಿರ್ಮಿಸುವುದು ನನ್ನ ಕನಸಾಗಿದ್ದು ಪ್ರಾಧಿಕಾರದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಯೋಜಿತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಗಮನಹರಿಸಲಾಗುವುದು ಎಂದರು. ಅಭಿವೃದ್ಧಿಗೆ ಪರ್ಯಾಯ ಹೆಸರು ಕಾಂಗ್ರೆಸ್ ಸಾಕಷ್ಟು ಕನಸುಗಳೊಂದಿಗೆ ಪ್ರಾಧಿಕಾರ ರಚನೆ ಮಾಡಲಾಗಿದ್ದು ಇನ್ನೂ ಮುಂದೆ ಅಭಿವೃದ್ಧಿ ಕಾಮಗಾರಿಗಾಗಿ ಜಿಲ್ಲಾಕೇಂದ್ರಕ್ಕೆ ಎಡತಾಕುವುದು ತಪ್ಪಲಿರುವುದರಿಂದ ಸಾರ್ವಜನಿಕರ ಸಮಯ ಹಾಗೂ ಹಣ ಎರಡು ವ್ಯರ್ಥವಾಗುವುದು ತಪ್ಪಲಿದೆ ಎಂದರು. ಪ್ರಾಧಿಕಾರದ ಸದಸ್ಯರಾಗಿ ಬಿ.ಡಿ ವಿಜಯ್, ಹೊಸಕೊಪ್ಪಲು ಚರಣ್, ಬೈಕೆರೆ ದೇವರಾಜ್ ನೇಮಿಸಲಾಗಿದೆ. ಪದಗ್ರಹಣಕ್ಕೂ ಮುನ್ನ ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿಚಂದ್ರು,ಎಚ್.ಎಚ್ ಉದಯ,ಹೀತುನಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.