ಹುಣಸಗಿಯಲ್ಲಿ ಸೈಯದ್ ಶಾ ಹಬೀಬುಲ್ಲಾ ಖಾದ್ರಿ ಉರುಸ್ ಸಂಭ್ರಮ

| Published : Jul 10 2024, 12:34 AM IST

ಹುಣಸಗಿಯಲ್ಲಿ ಸೈಯದ್ ಶಾ ಹಬೀಬುಲ್ಲಾ ಖಾದ್ರಿ ಉರುಸ್ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸಂತರ ಗದ್ದುಗೆಗೆ ಸೂಫಿ ಪಂಥದ ಖಾದರಿಯಾ ಸಂಪ್ರದಾಯದಂತೆ ಸಂದಲ್, ಗಲೀಫ್ ಹಾಗೂ ಚಾದರ್ ಸಮರ್ಪಣೆ ಮಾಡಲಾಯಿತು. ನಂತರ ಉರುಸ್‌ನಲ್ಲಿ ಭಾಗವಹಿಸಿದ್ದ ಸಕಲ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದಲ್ಲಿ ಸೂಫಿ ಸಂತ ಹಜರತ್ ಸೈಯದ್ ಶಹ ಹಬೀಬುಲ್ಲಾ ಖಾದ್ರಿ ಅವರ ಉರುಸ್ ಸಂಭ್ರಮದಿಂದ ಜರುಗಿತು.

ಇಲ್ಲಿನ ಸೈಯದ್ ಮಹ್ಮದ್ ಅಲಿ ಬೆಣ್ಣೂರ್ ಅವರ ಮನೆಯಿಂದ ಬೆಳಗ್ಗೆ ಸಂದಲ್ (ಗಂಧ)ನ್ನು ಸಕಲ ಮಂಗಲವಾದ್ಯಗಳ ಮೆರವಣಿಗೆಯೊಂದಿಗೆ ಮದೀನಾ ಮಸೀದಿ ಹತ್ತಿರದ ಖಾನ್ ಖಾಯೆ ಖಾದರಿಯಾದವರೆಗೂ ತರಲಾಯಿತು.

ಸಂತರ ಗದ್ದುಗೆಗೆ ಸೂಫಿ ಪಂಥದ ಖಾದರಿಯಾ ಸಂಪ್ರದಾಯದಂತೆ ಸಂದಲ್, ಗಲೀಫ್ ಹಾಗೂ ಚಾದರ್ ಸಮರ್ಪಣೆ ಮಾಡಲಾಯಿತು. ನಂತರ ಉರುಸ್‌ನಲ್ಲಿ ಭಾಗವಹಿಸಿದ್ದ ಸಕಲ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.

ಉರುಸ್‌ನಲ್ಲಿ ಖಾನ ಖಾಯೆ ಖಾದರಿಯಾದ ಸೈಯದ್ ಅಬ್ದುಲ್ ಖಾದರ್ ಜಾಯೆ ನಶೀನ್, ಸೈಯದ್ ಮಹ್ಮದ್ ಹನೀಫಸಾಬ್ ಬೆಣ್ಣೂರ್, ಸೈಯದ್ ಬಂದೆ ಅಲಿ, ಸೈಯದ್ ಮೊಯಿಜ್ ಪಾಶಾ, ದಸ್ತಗೀರ ಸಾಹೇಬ್ ಶ್ಯಾನಿ, ಅಲ್ಲಾಭಕ್ಷ್, ಅಬ್ದುಲ್ ಹಮೀದಸಾಬ್ ಡೆಕ್ಕನ್, ಮಹ್ಮದ್ ಅಲಿ ಹವಾಲ್ದಾರ್ ಹಾಗೂ ಪ್ರಮುಖರಾದ ಬಿ.ಎಲ್. ಹಿರೇಮಠ, ಶಿವಲಿಂಗಸ್ವಾಮಿ ವಿರಕ್ತಮಠ, ಶರಣು ದಂಡಿನ್, ಸಿದ್ದು ಮುದಗಲ್, ಬಸವರಾಜ್ ಮಲಗಲದಿನ್ನಿ, ರಮಜಾನ್ ಖುರೇಶಿ, ಬಾಬುಮಿಯ ಚೌದ್ರಿ, ಇಸ್ಮಾಯಿಲ್ ಬೆಣ್ಣಿ ಇತರರಿದ್ದರು. ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಹಾಗೂ ಶಿಷ್ಯರು ಭಾಗವಹಿಸಿ ಸಂತರಿಗೆ ಶರಣು ಸಮರ್ಪಣೆ ಮಾಡಿದರು.