ಸ್ತ್ರೀ ಶಕ್ತಿ ಸ್ಫೂರ್ತಿಯ ಸಂಕೇತ: ವಿಜಯಲಕ್ಷ್ಮಿ

| Published : Mar 14 2024, 02:02 AM IST

ಸಾರಾಂಶ

ಶಹಾಪುರ ನಗರದಲ್ಲಿ ಪತಂಜಲಿಯೋಗ ವಿಜ್ಞಾನ ತರಬೇತಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನಾಗಿ ಬೆಳೆಸುತ್ತಾರೆ. ಇದರಿಂದ ನಾಗರಿಕ ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂದು ಸಹಜ ಸ್ಥಿತಿ ಯೋಗ ಸಂಚಾಲಕರಾದ ವಿಜಯಲಕ್ಷ್ಮಿ ಕೆ. ಪಾಟೀಲ್ ಹೇಳಿದರು.

ನಗರದ ಯೋಗಧಾಮದಲ್ಲಿ ಪತಂಜಲಿ ಯೋಗ ವಿಜ್ಞಾನ ತರಬೇತಿ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗ ಗುರು ನರಸಿಂಹ ವೈದ್ಯ ಮಾತನಾಡಿ, ಮಹಿಳೆಯರನ್ನು ಸಬಲೀಕರಣಗೊಳಿಸುವುದು ಕೇವಲ ಗುರಿಯಲ್ಲ, ಅದು ಅಗತ್ಯವಾಗಿದೆ. ಮಹಿಳೆಯರ ಸಾಧನೆಗಳನ್ನು ಕೊಂಡಾಡೋಣ ಮತ್ತು ಪ್ರತಿಯೊಬ್ಬ ಮಹಿಳೆ ಅಭಿವೃದ್ಧಿ ಹೊಂದುವಂತಹ ಜಗತ್ತನ್ನು ರಚಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.

ವಕೀಲೆ ಶೈಲಜಾ ಹೊನ್ನಾರಡ್ಡಿ ಮಾತನಾಡಿ, ಭೂಮಿ ಮೇಲಿನ ಯಾವುದೇ ಪ್ರಾಣಿಗಳು, ಜೀವಿಗಳು ಪರಸ್ಪರ ಸಂಘರ್ಷದಿಂದ ಜೀವನ ನಡೆಸುವುದಿಲ್ಲ. ಆದರೆ, ಮನುಷ್ಯ ಮಾತ್ರ ಮೇಲು-ಕೀಳು ಎಂಬ ಅಸಮಾನತೆಯನ್ನು ಸಂಘರ್ಷವನ್ನು ಸೃಷ್ಟಿಸುತ್ತಾ ಜಗತ್ತನ್ನು ಹಾಳು ಮಾಡುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಶರಣು ಪಾಟೀಲ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಯೋಗ ಕ್ಷೇತ್ರದ ಡಾ. ಸಂಗೀತ ಅಶೋಕ ಗೌಳಿ, ಡಾ. ಸುಹಾಸಿನಿ ದೇವಿಪ್ರಸಾದ್, ವಿಜಯಲಕ್ಷ್ಮಿ ವಿ. ಸತ್ಯಂ ರೆಡ್ಡಿ, ಗೀತಾ ಎನ್. ವೈದ್ಯೆ, ಗಂಗಾ ಸಿ. ಗೋಗಿ, ಸ್ಮೀತಾ ಹೊಳ್ಳ ಇದ್ದರು. ಪ್ರತಿಭಾ ಗಿಂಡಿ ನಿರೂಪಿಸಿದರು. ವಿರೇಶ ಎಸ್. ಉಳ್ಳಿ ಸ್ವಾಗತಿಸಿದರು. ಸಂಗನಗೌಡ ಪಾಟೀಲ್ ಅನವಾರ ವಂದಿಸಿದರು.