ಮರಾಠಿ ಭಾಷಿಕರ ವಿರುದ್ಧ ಕ್ರಮ ಕೈಗೊಳ್ಳಿ

| Published : Feb 26 2025, 01:06 AM IST

ಸಾರಾಂಶ

ಬೆಳಗಾವಿ ಜಿಲ್ಲೆಯ ಪಂಥ ಬಾಳೆಕುಂದ್ರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಹಾಗೂ ಚಾಲಕನ ಮೇಲೆ ಗೂಂಡಾ ವರ್ತನೆ ತೋರಿರುವ ಮರಾಠಿ ಭಾಷಿಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ತಪ್ಪಿತಸ್ಥರ ಮೇಲೆ ರೌಡಶೀಟರ್‌ ಮತ್ತು ಗುಂಡಾ ವರ್ತನೆ ಕಾನೂನಿನಡಿಯಲ್ಲಿ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ನಿರ್ವಾಹಕ ಮತ್ತು ಚಾಲಕನಿಗೆ ನ್ಯಾಯ ಕೊಡಿಸಿ ನಮ್ಮ ಕರ್ನಾಟಕದ ಮಾನ ಉಳಿಸಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಬೆಳಗಾವಿ ಜಿಲ್ಲೆಯ ಪಂಥ ಬಾಳೆಕುಂದ್ರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಹಾಗೂ ಚಾಲಕನ ಮೇಲೆ ಗೂಂಡಾ ವರ್ತನೆ ತೋರಿರುವ ಮರಾಠಿ ಭಾಷಿಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ತಾಲೂಕು ಘಟಕದ ಅಧ್ಯಕ್ಷ ಇ.ಎಸ್.ಚಂದ್ರಶೇಖರ್ ಮಾತನಾಡಿ, ಪಂಥ ಬಾಳೇಕುಂದ್ರಿ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ರಾಜ್ಯದಲ್ಲಿ ಶಾಂತಿಯನ್ನು ಕದಡುವ ಉದ್ದೇಶದಿಂದ ಬಸ್ ಪ್ರಯಾಣದ ನಿಯಮಾವಳಿ ಗೊತ್ತಿದ್ದರೂ ಸಹಿತ ಸುಖಾಸುಮ್ಮನೆ ನಿರ್ವಾಹಕರಿಗೆ ಮರಾಠಿಯಲ್ಲಿ ಮಾತನಾಡು, ಇಲ್ಲಾಂದ್ರೆ ಮರಾಠಿ ಕಲಿತುಕೊ ಎಂದು ಬೈಯ್ದಿದ್ದಾರೆ. ಅವರು ತಮ್ಮ ಗುಂಡಾಗಳನ್ನು ಕರೆಯಿಸಿಕೊಂಡು ನಿರ್ವಾಹಕ ಮತ್ತು ಚಾಲಕನಿಗೆ ಮನಬಂದಂತೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದರು. ರಾಜ್ಯದ ಜನತೆ ತಲೆ ತಗ್ಗಿಸುವಂತಹ ಇಂತಹ ಕೃತ್ಯಗಳು ಪದೇ ಪದೆ ಬೆಳಗಾವಿಯಲ್ಲಿ ನಡೆಯುತ್ತಲೇ ಇರುತ್ತವೆ. ತಪ್ಪಿತಸ್ಥರ ಮೇಲೆ ರೌಡಶೀಟರ್‌ ಮತ್ತು ಗುಂಡಾ ವರ್ತನೆ ಕಾನೂನಿನಡಿಯಲ್ಲಿ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ನಿರ್ವಾಹಕ ಮತ್ತು ಚಾಲಕನಿಗೆ ನ್ಯಾಯ ಕೊಡಿಸಿ ನಮ್ಮ ಕರ್ನಾಟಕದ ಮಾನ ಉಳಿಸಬೇಕೆಂದು ಒತ್ತಾಯಿಸಿದರು.ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳಾದ ಉಪಾಧ್ಯಕ್ಷ ರುದ್ರೇಶ್, ಗೌರವಾಧ್ಯಕ್ಷ ಧರ್ಮೇಗೌಡ, ಆಟೋ ಘಟಕದ ಅಧ್ಯಕ್ಷ ಪುನೀತ್, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಹೊಯ್ಸಳ ಆಟೋ ಚಾಲಕರ ಅಧ್ಯಕ್ಷ ದೀಪು, ಪದಾಧಿಕಾರಿಗಳಾದ ರಾಮೇಗೌಡ, ಜಗದೀಶ್, ಗಿರೀಶ್ ಹಾಜರಿದ್ದರು.