ಸಾರಾಂಶ
ಹಿರಿಯೂರು: ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಮಾದಿಗ ಸಮುದಾಯದವರಿಗೆ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಕಾಲುವೆಹಳ್ಳಿ ಗ್ರಾಮದ ದಲಿತರಿಗೆ ಕ್ಷೌರ ಮಾಡಲು ಅಲ್ಲಿನ ಗ್ರಾಮದವರು ನಿರಾಕರಣೆ ಮಾಡುತ್ತಿದ್ದು, ಈ ವಿಚಾರವಾಗಿ ಪ್ರಶ್ನೆ ಮಾಡಿದ ಮಾದಿಗ ಸಮುದಾಯದ ಯುವಕನಿಗೆ ಗ್ರಾಮದ ಕೆಲವು ಜನರು ಪ್ರಾಣ ಬೆದರಿಕೆ ಹಾಕಿದ್ದಾರೆ. ಮಾದಿಗ ಸಮುದಾಯದ ಯುವಕರ ಜೊತೆ ಮಾತನಾಡಿರುವ ಮೊಬೈಲ್ ಆಡಿಯೋದಲ್ಲಿ ಗ್ರಾಮ ಪಂಚಾಯ್ತಿಯ ನೀರಗಂಟಿ ಸೇರಿದಂತೆ ಗ್ರಾಮದ ನಾಲ್ಕೈದು ಜನ ಬೆದರಿಕೆ ಹಾಕಿರುವ ಆಡಿಯೋ ಹೊರಬಿದ್ದಿದೆ. ಗ್ರಾಮದಲ್ಲಿ ನಡೆಯುವ ಪಂಚಾಯ್ತಿಗೆ ಮಾದಿಗರು ಬಾರದೇ ಹೋದರೆ ತಕ್ಕಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ. ಆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಹಾಗೂ ಮಾಡಲು ಕುಮ್ಮಕ್ಕು ನೀಡುವ ಮತ್ತು ಮಾದಿಗ ಸಮುದಾಯದವರಿಗೆ ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಜೀವೇಶ್ ಬೋರನಕುಂಟೆ, ಕೆಪಿ.ಶ್ರೀನಿವಾಸ್, ಮಂಜುನಾಥ್ ಹೆಗ್ಗೆರೆ, ರಘುನಾಥ್ ಕೆಆರ್.ಹಳ್ಳಿ, ಮಾರುತೇಶ್ ಕೂನಿಕೆರೆ, ಓಂಕಾರ್ ಮಟ್ಟಿ. ಶಿವು, ಕರಿಯಪ್ಪ, ಘಾಟ್ ರವಿ, ರಾಘವೇಂದ್ರ, ತಿಪ್ಪೇಸ್ವಾಮಿ , ಲಕ್ಷ್ಮಣ್ , ಬೆಳ್ಳಿಯಪ್ಪ, ರಂಗಸ್ವಾಮಿ, ಲಿಂಗರಾಜ್ ಮತ್ತಿತರರಿದ್ದರು.