ಸಾರಾಂಶ
ಅಸಂಖ್ಯಾತ ಭಕ್ತ ಸಮೂಹ ಹೊಂದಿರುವ ಹಿಂದುಗಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಗೂ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ದುಷ್ಟಶಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆಗ್ರಹಿಸಿದರು.
ರೋಣ: ಅಸಂಖ್ಯಾತ ಭಕ್ತ ಸಮೂಹ ಹೊಂದಿರುವ ಹಿಂದುಗಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಗೂ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ದುಷ್ಟಶಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆಗ್ರಹಿಸಿದರು.
ಸೋಮವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿಯ ವರೆಗೆ ಧರ್ಮಸ್ಥಳ ಸುಕ್ಷೇತ್ರ ಹಾಗೂ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಜರುಗಿದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದರು.ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ಅಪಾರ ಭಕ್ತರಿಗೆ ಅಲ್ಲಿಯ ಪಾವಿತ್ರ್ಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲವು ಕಿಡಿಗೇಡಿಗಳು ವಿದೇಶಗಳಿಂದ ಬರುವ ಹಣದ ಆಸೆಗಾಗಿ ಈ ಕೃತ್ಯ ಮಾಡುತ್ತಿದ್ದಾರೆ. ತಮ್ಮ ಆಶಯದಂತೆ ಎಲ್ಲೆಂದರಲ್ಲಿ ಗುಂಡಿ ತೋಡಿ ಶವ ಹೂತಿರುವ ಬಗ್ಗೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂಬುದು ಸ್ಪಷ್ಟವಾಗಿದೆ. ಕೇವಲ ಹಣದ ಆಸೆಗಾಗಿ ಇವರುಗಳು ಕ್ಷೇತ್ರದ ಹೆಸರು ಕೆಡಿಸುವ ನಿಟ್ಟಿನಲ್ಲಿ ಹುನ್ನಾರ ನಡೆಸಿದ್ದು ಅಂತಹ ದುಷ್ಟ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.
ಬಿಜೆಪಿ ಹಿರಿಯ ಮುಖಂಡ ಅಶೋಕ ನವಲಗುಂದ ಮಾತನಾಡಿ, ಕಳೆದ ಕೆಲವು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಹೆಸರಿಗೆ ಧಕ್ಕೆ ಬರುವ ರೀತಿಯಲ್ಲಿ ಕೆಲವು ಕುತಂತ್ರವನ್ನು ನಡೆಸಿದ್ದು, ಅವರು ನಡೆಸಿರುವ ನಾಟಕಗಳು ಒಂದೊಂದಾಗಿ ಹೊರಬರುತ್ತಿದ್ದು, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವ ಇಂತಹ ವ್ಯಕ್ತಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ನಾಗರಾಜ ಕೆ. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ, ರಮೇಶ ವಕ್ಕರ ಬಾಲಾಜಿರಾವ್ ಭೋಸಲೆ, ಶಿವಾನಂದ ಮಠದ, ಮುತ್ತಣ್ಣ ಕಡಗದ, ಮಾಜಿ ಜಿಪಂ ಅಧ್ಯಕ್ಷ ನಿಂಗಪ್ಪ ಕೆಂಗಾರ, ಅನೀಲ ಪಲ್ಲೇದ, ಮಲ್ಲು ಕುರಿ, ಮಲ್ಲು ಮಾದರ, ಪರಶು ಮಾದರ, ಶರಣಪ್ಪ ಕಂಬಳಿ, ಅಂದಪ್ಪ ಹಾರೋಗೇರಿ, ಬಸವರಾಜ ಕೊಟಗಿ, ಈರಣ್ಣ ಯರಗೇರಿ, ಶಿವಬಸಪ್ಪ ಬೆಲ್ಲದ, ಬಸವರಾಜ ರಂಗನಗೌಡ್ರ, ಎಸ್.ವ್ಹಿ. ಪಾಟೀಲ, ಇಂದಿರಾ ತೇಲಿ, ಶಿವಾನಂದ ಜಿಡ್ಡಿಬಾಗಿಲ, ಮುದಿಯಪ್ಪ ಕರಡಿ, ಕಟ್ಟಿಮನಿ, ರಾಜೇಶ್ವರಿ ಹೊಸಪೇಟಿ, ವಿಜಯಲಕ್ಷ್ಮಿ ಕೊಟಗಿ, ಸುಜಾತಾ ಪ್ರಧಾನಿ ರೈತ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಯುವ ಮೋರ್ಚಾ, ಎಸ್.ಸಿ, ಎಸ್.ಟಿ. ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.