ಹೊಲಕ್ಕೆ ದಾರಿ ಬಿಡದವರ ಮೇಲೆ ಕ್ರಮಕೈಗೊಳ್ಳಿ

| Published : Jun 15 2024, 01:06 AM IST

ಸಾರಾಂಶ

ಪಟ್ಟಣದ ಕೋರಮಾರ ರಸ್ತೆಗೆ ಹೊಂದಿಕೊಂಡಿರುವ ಸರ್ವೇ ನಂ.೩೫೨ ಸೇರಿದಂತೆ ಅನೇಕ ಜಮೀನುಗಳ ಬಿತ್ತನೆ ಕಾರ್ಯಕ್ಕೆ ಬಿತ್ತನೆ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಕೆಲ ಜಮೀನುಗಳ ರೈತರು ಶಿರಸ್ತೇದಾರ ಮಹೇಶ ಬಳಗಾನೂರ ಅವರ ಮೂಲಕ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಬಸವನಬಾಗೇವಾಡಿ: ಪಟ್ಟಣದ ಕೋರಮಾರ ರಸ್ತೆಗೆ ಹೊಂದಿಕೊಂಡಿರುವ ಸರ್ವೇ ನಂ.೩೫೨ ಸೇರಿದಂತೆ ಅನೇಕ ಜಮೀನುಗಳ ಬಿತ್ತನೆ ಕಾರ್ಯಕ್ಕೆ ಬಿತ್ತನೆ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಕೆಲ ಜಮೀನುಗಳ ರೈತರು ಶಿರಸ್ತೇದಾರ ಮಹೇಶ ಬಳಗಾನೂರ ಅವರ ಮೂಲಕ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಹೋದ ರೈತರಿಗೆ ವರುಣ ಕೃಪೆ ತೋರಿದ್ದಾನೆ. ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಸೇರಿ ಇತರೇ ಕಾರ್ಯಗಳಿಗೆ ಕೆಲ ಜಮೀನುಗಳ ಪ್ರಬಲ ವ್ಯಕ್ತಿಗಳು ದಾರಿಯನ್ನು ಕೊಡದೇ ದಾರಿಯಲ್ಲಿ ತೆಗ್ಗುಗಳನ್ನು ತೋಡಿ ನಿಮಗೆ ದಾರಿಯಿಲ್ಲ. ನೀವು ನ್ಯಾಯಾಲಯಕ್ಕೆ ಹೋಗಿ ದಾರಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಕೂಡಲೇ ತಹಸೀಲ್ದಾರರು ಅವರ ವಿರುದ್ಧ ಕ್ರಮಕೈಗೊಂಡು ರೈತರ ದಾರಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರವಿ ಗೊಲ್ಲರ, ಸುರೇಶ ಗುಂಡಿ, ಐ.ಎಂ.ನಾಗೂರ, ಜಂಗಪ್ಪ ಗೊಲ್ಲಾರ, ವಿರೇಶ ಬಸರಕೋಡ, ಭೀಮರೆಡ್ಡಿ ಜಾಯವಾಡಗಿ ಇತರರು ಇದ್ದರು.