ಸಾರಾಂಶ
ಮಹರ್ಷಿ ವಾಲ್ಮೀಕಿ ಜಯಂತಿಯೊಳಗೆ ನಕಲಿ ಎಸ್ಟಿ ಪ್ರಮಾಣ ಪತ್ರ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗದಿದ್ದರೆ ಉತ್ತರ ಕರ್ನಾಟಕದಲ್ಲಿ ಕ್ರಾಂತಿಕಾರಕ ಹೋರಾಟಕ್ಕೆ ನಮ್ಮ ಸಮಾಜ ಮುಂದಾಗಲಿದೆ ಎಂದು ವಾಲ್ಮೀಕಿ ಮಹಾಸಭೆ ರಾಜ್ಯ ಮುಖಂಡ ಮಾರಪ್ಪ ನಾಯಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹರ್ಷಿ ವಾಲ್ಮೀಕಿ ಜಯಂತಿಯೊಳಗೆ ನಕಲಿ ಎಸ್ಟಿ ಪ್ರಮಾಣ ಪತ್ರ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗದಿದ್ದರೆ ಉತ್ತರ ಕರ್ನಾಟಕದಲ್ಲಿ ಕ್ರಾಂತಿಕಾರಕ ಹೋರಾಟಕ್ಕೆ ನಮ್ಮ ಸಮಾಜ ಮುಂದಾಗಲಿದೆ ಎಂದು ವಾಲ್ಮೀಕಿ ಮಹಾಸಭೆ ರಾಜ್ಯ ಮುಖಂಡ ಮಾರಪ್ಪ ನಾಯಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನವನಗರದ ವಾಲ್ಮೀಕಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ 60,000, ಬಾಗಲಕೋಟೆ 7000, ಯಾದಗಿರಿ 1800, ಕಲಬುರ್ಗಿ ಜಿಲ್ಲೆಯಲ್ಲಿ 18,000 ಸಾವಿರ ನಕಲಿ ಜಾತಿ ಪ್ರಮಾಣಪತ್ರ ವಿತರಿಸಿದ ಬಗ್ಗೆ ದಾಖಲೆ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಒಟ್ಟು ರಾಜ್ಯದಲ್ಲಿ 2 ಲಕ್ಷ ನಕಲಿ ಜಾತಿ ಪ್ರಮಾಣಪತ್ರ ವಿತರಿಸಿದ ಬಗ್ಗೆ ನಮ್ಮ ಬಳಿ ದಾಖಲೆ ಇದೆ. 30 ಸಾವಿರ ಜನ ಎರಡೆರಡು ಜಾತಿ ಪ್ರಮಾಣ ಪತ್ರ ಕೂಡ ಪಡೆದಿದ್ದಾರೆ. ಇಂತಹವರ ಮೇಲೆ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದರು.
ಸೆ.18ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದ್ದು ನಕಲಿ ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಉತ್ತರ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ. ಇದನ್ನು ಕಾಯ್ದು ನೋಡುತ್ತಿದ್ದೇವೆ ಎಂದರು.ವಾಲ್ಮೀಕಿ ಜಯಂತಿಯೊಳಗೆ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮೊದಲು ಶಾಸಕರ ಮನೆ ಮುಂದೆ ಹೋರಾಟ ನಡೆಸಲಾಗುವುದು ನಂತರ ಇದಕ್ಕೂ ಸರ್ಕಾರ ಮಣಿಯದಿದ್ದರೆ ಉತ್ತರ ಕರ್ನಾಟಕದಲ್ಲಿ ಕ್ರಾಂತಿಕಾರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಶ್ರವಣಕುಮಾರ ನಾಯಕ ಮಾತನಾಡಿದರು. ದ್ಯಾಮಣ್ಣ ಗಾಳಿ, ರಾಜು ನಾಯ್ಕರ, ಯಲ್ಲಪ್ಪ ಕ್ಯಾದಿಗೇರಿ,ಲಕ್ಷ್ಮಣ ಮಾಲಗಿ,ಶರಣಪ್ಪ ಜಾಲಿಕಟ್ಟಿ ಪತ್ರಿಕಾಗೋಷ್ಠಿ ಯಲ್ಲಿದ್ದರು.