ಮಾದಪ್ಪನ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಳ್ಳಿ

| Published : Mar 19 2024, 12:49 AM IST

ಮಾದಪ್ಪನ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪವಿತ್ರ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಯ ಸನ್ನಿದಿ ಮತ್ತು ನಾಗಮಲೆಯನ್ನು ಪ್ಲಾಸ್ವಿಕ್ ಮುಕ್ತ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮೈಸೂರು ಪರಿಸರ ವಾರಿಯರ್ಸ್ ಗ್ರೂಪ್‌ನ ಪಿ. ಮಂಜುನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಪವಿತ್ರ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಯ ಸನ್ನಿದಿ ಮತ್ತು ನಾಗಮಲೆಯನ್ನು ಪ್ಲಾಸ್ವಿಕ್ ಮುಕ್ತ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮೈಸೂರು ಪರಿಸರ ವಾರಿಯರ್ಸ್ ಗ್ರೂಪ್‌ನ ಪಿ. ಮಂಜುನಾಥ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಯುಗಾದಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುತ್ತಾರೆ. ಜೊತೆಗೆ ಪಾದಯಾತ್ರೆಯಲ್ಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಾಲಯದ ಅವರಣ ಮತ್ತು ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆ ಮಾಡುವ ವೇಳೆ ಕುಡಿಯುವ ನೀರು ಮತ್ತು ಅಹಾರ ಅಗತ್ಯ ವಸ್ತುಗಳು ಪ್ಲಾಸ್ಟಿಕ್ ವಸ್ತುಗಳಲ್ಲಿ ಪೂರೈಕೆ ಆಗುತ್ತಿರುವುದರಿಂದ ನಮ್ಮ ಶ್ವಾಸಕೋಶದಂತಿರುವ ಅರಣ್ಯ ಪ್ರದೇಶ ಪ್ಲಾಸ್ಟಿಕ್‌ ವಸ್ತುಗಳಿಂದ ಮಾಲಿನ್ಯಕ್ಕೆ ಒಳಗಾಗುತ್ತಿದೆ. ಅಮೂಲ್ಯವಾದ ಜೀವಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಪ್ಲಾಸ್ಟಿಕ್ ವಸ್ತುಗಳಿಂದ ಬೇಸಿಗೆಯಲ್ಲಿ ಅರಣ್ಯದಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ನಿಂದ ಮಾನವ ನಿರ್ಮಿತ ಬೆಂಕಿಯಿಂದಾಗುವ ಅನಾಹುತಕ್ಕೆ ಅರಣ್ಯ ನಾಶವಾಗುತ್ತಿದೆ ಎಂದರು.ಜನರ ಜೀವನದಲ್ಲಿ ಒಂದು ಭಾಗವಾಗಿರುವ ಏಕ ಬಳಕೆ ಪ್ಲಾಸ್ಟಿಕ್ ಭೂಮಂಡಲವನ್ನೇ ಆವರಿಸಿ ಸಕಲ ಜೀವರಾಶಿಗೂ ಕಂಠಕವಾಗಿದೆ. ನಮ್ಮ ಅರಣ್ಯ ಪ್ರದೇಶ ಮತ್ತು ಯಾತ್ರಾ ಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್‌ನಿಂದ ಮುಕ್ತವಾಗಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ಮಹದೇಶ್ವರ ಬೆಟ್ಟಕೆ ಪಾದಯಾತ್ರೆ ಬರುವಂತಹ ಭಕ್ತಾದಿಗಳಿಗೆ ಕಾಡು ಪ್ರದೇಶದ ಮಾರ್ಗದಲ್ಲಿ ೨೫೦ ಮೀಟರ್‌ಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಟ್ಯಾಂಕರ್ ಮೂಲಕ ಒದಗಿಸಬೇಕು. ಬೆಟ್ಟಕ್ಕೆ ಬರುವಂತ ಭಕ್ತಾದಿಗಳು ಜೊತೆಗೆ ಒಂದು ತಟ್ಟೆ ಲೋಟ ತರಬೇಕು, ದಾನಿಗಳು ಕೊಡುವ ಆಹಾರ ಪದಾರ್ಥಗಳನ್ನು ಪ್ರಕೃತಿ ಸ್ನೇಹಿ ಬಾಳೆ ಎಲೆ, ಅಡಿಕೆ ತಟ್ಟೆ, ಎಲೆ ಜೊನ್ನೆಗಳಲ್ಲಿ ಸ್ವೀಕರಿಸಿ, ಅಲಲ್ಲಿ ಇಟ್ಟಿರುವು ಕಸದ ಬುಟ್ಟಿಗಳಲ್ಲಿ ಹಾಕಬೇಕು,

ದಾನಿಗಳು ವಿತರಿಸುವ ಆಹಾರ ಪದಾರ್ಥ ನೋಂದಣಿ ಮತ್ತು ಅನುಮತಿ ಅಗತ್ಯವಾಗಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಅರಣ್ಯ ಪ್ರದೇಶಗಳಲ್ಲಿ ಭಕ್ತಾದಿಗಳಿಗೆ ನೀರು ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಪದಾರ್ಥಗಳಲ್ಲಿ ಹಂಚದಂತೆ, ಬಳಸದಂತೆ ಅನುಮತಿ ನೀಡದಂತೆ, ಕಡ್ಡಾಯವಾಗಿ ಕಾನೂನು ಜಾರಿಗೆ ಬರಬೇಕು ತಪ್ಪಿದರೆ ದಂಡ ವಿಧಿಸಬೇಕು ಆಗ ಮಾತ್ರ ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ ಎಂದರು.ಜಿಲ್ಲಾಡಳಿತ ಆದೇಶವನ್ನು ಮೀರಿ ಪ್ಲಾಸ್ಟಿಕ್ ವಸ್ತುಗಳ ಮೂಲಕ ಆಹಾರ ಹಂಚುವ ವ್ಯಕ್ತಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕು, ಮಹಾಶಿವರಾತ್ರಿ ದೀಪಾವಳಿ, ಯುಗಾದಿ ಪ್ರಯುಕ್ತ ಜಿಲ್ಲಾಡಳಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿರ್ಬಂಧಿಸಿ ಅಪಘಾತ ತಡೆಗೆ ಕ್ರಮ ತೆಗೆದುಕೊಂಡ ರೀತಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೂ ತೆಗೆದುಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸತೀಶ್‌ಕುಮಾರ್ ಇದ್ದರು.