ಉಚಿತ ಶಿಬಿರಗಳ ಸದುಪಯೋಗ ಪಡೆಯಿರಿ

| Published : Jun 15 2024, 01:07 AM IST

ಸಾರಾಂಶ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದ ಸದುಪಯೋಗವನ್ನು ಗ್ರಾಮೀಣ ಭಾಗದ ಜನತೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದ ಸದುಪಯೋಗವನ್ನು ಗ್ರಾಮೀಣ ಭಾಗದ ಜನತೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ ಹೇಳಿದರು.

ಬಬಲೇಶ್ವರ ತಾಲೂಕಿನ ಶೆಗುಣಶಿ ಗ್ರಾಮದಲ್ಲಿ ಜಿಲ್ಲಾ ಆರೊಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ಮತ್ತು ರೋಟರಿ ಸಂಸ್ಥೆ ಉತ್ತರ, ಸಂಜೀವಿನಿ ಫಾರ್ಮಸಿ ಕಾಲೇಜ ಹಾಗೂ ಬಿಎಲ್‌ಡಿಇ ಸಂಸ್ಥೆಯ ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ‌ ಮಾತನಾಡಿ, ಕಣ್ಣಿನ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಆರೋಗ್ಯದ ಹಿತ ದೃಷ್ಟಿಯಿಂದ ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಎಂದರು.

ನಾಶೀರ ಬೊರ್ಸಾದವಾಲಾ, ಮಲ್ಲು ಕಲಾದಗಿ, ರಾಜ ಶಹಾರು, ಮೀನಾಕ್ಷಿ ಸೊನ್ನದ, ಬಾಪುಗೌಡ ಪಾಟೀಲ, ವಿಠ್ಠಲ ತೇಲಿ, ಡಾ.ಸಂಪತ ಕುಮಾರ, ಡಾ.ಕವಿತಾ, ಡಾ.ಪ್ರಿಯಂಕಾ ಪಾಟೀಲ, ಡಾ. ಸಂಜೀತ ಗಾಂಧಿ, ಡಾ. ಸ್ನೇಹಲತಾ, ಡಾ. ಅಶೋಕ ವಾಲಿ, ಪ್ರಸಾದ ನಾಯ್ಡು, ಉದಯಕುಮಾರ ಯಾಳವಾರ ಮುಂತಾದವರು ಇದ್ದರು.