ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಯೋಜನೆ 2030ರವರೆಗೆ ವಿಸ್ತರಣೆಯಾಗಿದ್ದು, ಬೀದಿ ಬದಿ ವ್ಯಾಪಾರಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ ಹೇಳಿದರು.ನಗರಸಭೆ ಸಭಾಂಗಣದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ನಗರಸಭೆ, ಲೀಡ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳು ಸಂಯುಕ್ತವಾಗಿ ಲೋಕ ಕಲ್ಯಾಣ ಮೇಳದ ಕುರಿತು ಮಾಹಿತಿ ನೀಡುವ ಹಾಗೂ ಛತ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ 15 ಸಾವಿರ, 25 ಸಾವಿರ ಮತ್ತು 50 ಸಾವಿರ ರು.ವರೆಗೆ ಸಾಲ ಸೌಲಭ್ಯ ಸಿಗಲಿದೆ. 50 ಸಾವಿರ ಸಾಲ ಮಾಡಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಮುಂದಿನ ದಿನಗಳಲ್ಲಿ 30 ಸಾವಿರ ರು. ಮೌಲ್ಯದ ಕ್ರೆಡಿಟ್ ಕಾರ್ಡ್ ಸೌಲಭ್ಯ ದೊರೆಯಲಿದೆ. 20 ರಿಂದ 50 ದಿನಗಳ ವರೆಗೆ ಬಡ್ಡಿ ರಹಿತವಾಗಿ 30 ಸಾವಿರ ರು. ಸಾಲ ಸಿಗಲಿದೆ ಎಂದು ತಿಳಿಸಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ಕುಮಾರ್ ಬ್ಯಾಂಕ್‌ಗಳ ಮೂಲಕ ಖಾತೆದಾರರಿಗೆ ಇರುವ ವಿಮಾ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಕ್ರೆಡಿಟ್ ಕಾರ್ಡ್ ಅನ್ನು ವ್ಯಾಪಾರಿಗಳು ತಮ್ಮ ವ್ಯಾಪಾರದ ಕಚ್ಚಾ ಪದಾರ್ಥಗಳನ್ನು ಮಾತ್ರ ಖರೀದಿ ಮಾಡಲು ಉಪಯೋಗವಾಗಲಿದೆ. ಚಿನ್ನ, ಬೆಳ್ಳಿ, ಸೀರೆ ಇತ್ಯಾದಿ ಖರೀದಿಗೆ ಅವಕಾಶವಿಲ್ಲ ಎಂದರು. ತಾಲೂಕು ಆರೋಗ್ಯಾಕಾರಿ ಡಾ.ಉಮಾ ಮಾತನಾಡಿ, ರಸ್ತ ಬದಿಯಲ್ಲಿ ಆಹಾರ ಪದಾರ್ಥಗಳನ್ನು ಸಿದ್ದಪಡಿಸಿ ಮಾರಾಟ ಮಾಡುವವರು (ಪಾನಿಪೂರಿ, ಬಜ್ಜಿ-ಬೋಂಡ, ಚುರುಮುರಿ, ಸಮೋಸ, ಮಂಚೂರಿ, ದೋಸೆ ಇತ್ಯಾದಿ) ವ್ಯಾಪಾರಿಗಳು ತಾವು ಸ್ವತಃ ಸ್ವಚ್ಚತೆ ಕಾಪಾಡಿಕೊಂಡು ತಮ್ಮ ವ್ಯಾಪಾರ ಸ್ಥಳವನ್ನು ಸ್ವಚ್ಛವಾಗಿಡಬೇಕು ಎಂದು ಸಲಹೆ ನೀಡಿದರು.ಎಫ್.ಎಸ್.ಎಸ್.ಎ.ಐ ಅಧಿಕಾರಿ ಲಿಂಗರಾಜು ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳು, ಬೇಕರಿ, ಹೋಟೆಲ್ ಇತ್ಯಾದಿ ಆಹಾರ ಸಿದ್ದಪಡಿಸಿ ಮಾರಾಟ ಮಾಡುವ ವ್ಯಾಪಾರಿಗಳು ತಪ್ಪದೆ ಎಫ್ಎಸ್ಎಸ್ಎಐ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ವ್ಯಾಪಾರ ಸ್ಥಳದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆಹಾರ ಪದಾರ್ಥ ಮಾರಾಟ, ತಯಾರಿಕೆ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ವೀರಾಂಜನೇಯ ಮಾತನಾಡಿ, ರಸ್ತೆಬದಿ ವ್ಯಾಪಾರಿಗಳು ಶೂನ್ಯ ಬಾಕಿ ಖಾತೆಗಳನ್ನು ತೆರೆಯಲು ಅವಕಾಶವಿದೆ. ಇದಲ್ಲದೆ ಸಾಲ ಸೌಲಭ್ಯ ಪಡೆಯಲು ನಗರಸಭೆವತಿಯಿಂದ ಪಡೆದ ಪರವಾನಿಗೆ ಅಗತ್ಯವಾಗಿದೆ ಎಂದರು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಅಕ್ಲಿಂ, ಸೋಮಶೇಖರ್ (ಮಣಿ), ಮೋಯಿನ್ ಖುರೇಷಿ, ನಗರಸಭೆ ಅಧಿಕಾರಿಗಳಾದ ನಟರಾಜು, ರಾಮಕೃಷ್ಣ, ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು....ಕೋಟ್ ...ನಾಗರೀಕರ ಆರೋಗ್ಯ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು 100 ವರ್ಷ ಬದುಕಿದ ಇತಿಹಾಸವಿಲ್ಲ. ಸ್ವಚ್ಛತಾ ಕೆಲಸದಲ್ಲಿ ನಿರತರಾಗುವ ಅವರು ಅಕಾಲಿಕ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಈಡಾಗುತ್ತಾರೆ. ಹಾಗಾಗಿ ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ಪೌರಕಾರ್ಮಿಕರ ಕೆಲಸವಲ್ಲ. ಅದು ನಗರದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.
- ಕೆ.ಶೇಷಾದ್ರಿ (ಶಶಿ), ಅಧ್ಯಕ್ಷರು, ನಗರಸಭೆ, ರಾಮನಗರ24ಕೆಆರ್ ಎಂಎನ್ 6.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಣೆ ಮಾಡಲಾಯಿತು.