ಸಾರಾಂಶ
ದೇವನಹಳ್ಳಿ: ತಾಲೂಕಿನ ಬಿದಲೂರು ವ್ಯವಸಾಯ ಸೇವಾ ಸಹಕಾರ ಸಂಘ ಸಹಕಾರ ಕ್ಷೇತ್ರದಲ್ಲಿ, ಬ್ಯಾಂಕಿಂಗ್ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ಸುದೀರ್ಘ ಕಾರ್ಯ ಚಟುವಟಿಕೆಗಳಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಸದಸ್ಯರು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಜಿಲ್ಲಾ ಕೇಂದ್ರ ಎಂ.ರಮೇಶ್ ತಿಳಿಸಿದರು.
ತಾಲೂಕಿನ ಬಿದಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ೬೪ ವರ್ಷಗಳ ಹಿಂದೆ ಪ್ರಾರಂಭವಾದ ಸಂಘ ಹೆಮ್ಮರವಾಗಿ ಮಾದರಿ ಸಂಘವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ನಂ.೧ ಸ್ಥಾನಕ್ಕೇರಲಿದೆ. ತಾಲೂಕಿನಲ್ಲಿ ೧೬ ಸಂಘಗಳಿದ್ದು ಬಿದಲೂರು ಸಂಘ ಪ್ರಥಮ ಸ್ಥಾನದಲ್ಲಿದೆ. ಸಹಕಾರ ಸಂಘಕ್ಕೆ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ದ ಎಂದರು.ಬಿದಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿ, ಸಂಘದ ೧೦ ವರ್ಷದ ಸಾಧನೆಯ ಪಕ್ಷಿನೋಟವನ್ನು ಎಲ್ಲಾ ಸದಸ್ಯರಿಗೂ ತಲುಪಿಸಲಾಗಿದೆ. ಸಂಘ ಕಳೆದ ೧೦ ವರ್ಷದಲ್ಲಿ ಎಲ್ಲಾ ರಂಗದಲ್ಲೂ ಹೆಮ್ಮರವಾಗಿ ಬೆಳೆಯುತ್ತಿದೆ. ಸದಸ್ಯರು ಸಹಕಾರ ಸಂಘದಲ್ಲಿ ಹೆಚ್ಚು ಠೇವಣಿ ಇಡಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ನಮ್ಮ ಸಂಘದಲ್ಲೂ ದೊರೆಯುತ್ತಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಿ, ಸಂಘಕ್ಕೆ ೪೨ ಲಕ್ಷ ನಿವ್ವಳ ಲಾಭ ಬಂದಿದೆ ಎಂದರು.
ಬಿದಲೂರು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಿಇಒ ಕೆ.ವೆಂಕಟೇಶ್ ಮಾತನಾಡಿ, ಸಂಘದ ಸಿಬ್ಬಂದಿ ವರ್ಗವನ್ನು ಹೆಚ್ಚಿಸಿ ಸದಸ್ಯರ ಸೇವೆಗೆ ನಮ್ಮ ತಂಡ ಸದಾ ಸಿದ್ದವಿದೆ. ಕಳೆದ ಸಾಲಿನಲ್ಲಿ ೨೮೬ ಕೋಟಿ ವ್ಯವಹಾರ ನಡೆಸಿದ್ದೇವೆ. ರಸಗೊಬ್ಬರ, ಪಶು ಆಹಾರ ಮಾರಾಟದಿಂದ ಸಂಘ ಉತ್ತಮ ಲಾಭದತ್ತ ಸಾಗುತ್ತಿದೆ. ಸರಕಾರದ ಯೋಜನೆಗಳು ನೇರವಾಗಿ ಸದಸ್ಯರ ಖಾತೆಗೆ ಜಮಾ ಆಗುವಂತೆ ಹೊಸ ತಂತ್ರಜ್ಞಾನವನ್ನು ಸಂಘದಲ್ಲಿ ಅಳವಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಸಂಘ ದ್ವಿತೀಯ ಸ್ಥಾನದಲ್ಲಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬಿದಲೂರು ಸಂಘ ಗುರುತಿಸಿಕೊಳ್ಳಲಿದೆ. ಸಂಘದ ಕಾರ್ಯಚಟುವಟಿಕೆಗಳು ಪಾರದರ್ಶಕ, ಪ್ರಾಮಾಣಿಕತೆಯಿಂದ ಎಲ್ಲಾ ಸದಸ್ಯರಿಗೂ ತಲುಪಿಸುತ್ತಿದೆ ಎಂದು ಹೇಳಿದರು.ಇದೇ ವೇಳೆ ಬಿದಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಶಶಿಧರ್, ನಿರ್ದೇಶಕರಾದ ಎನ್.ರವಿ, ಆರ್.ರಾಮಾಂಜಿನಪ್ಪ, ಕೆ.ಮಹೇಶ್, ವಾಸುದೇವ್, ಬಿ.ಎಂ.ಮಹೇಶ್, ಲಕ್ಷ್ಮೀನಾರಾಯಣ್, ಎಂ.ಶಿವಕುಮಾರ್, ಡಿ.ಆರ್ವೆಕಟೇಶ್, ಎನ್.ಕಮಲ, ಟಿ.ಎನ್.ಆಶಾ, ಬಿ.ಆರ್.ಶಂಕರಪ್ಪ, ಆರ್.ತಿಮ್ಮರಾಯಪ್ಪ, ಸಿ.ಎಂ.ಮಂಜುನಾಥ್, ಸಿಬ್ಬಂದಿಗಳಾದ ಎಂ.ಮುನಿರಾಜು, ಎಸ್.ಎನ್.ಮಮತ, ಜಿ.ಸುನಿಲ್‌ಕುಮಾರ್, ಬಿ.ಎಂ.ತ್ರಿವೇಣ್‌ಕುಮಾರ್, ಬಾಲಾಜಿಗೌಡ.ವೈ.ಎಂ, ನರಸಿಂಹಮೂರ್ತಿ, ಎನ್.ಮನೋಜ್, ಬಿ.ಕೆ.ಆನಂದ್, ಡಿ.ಮಂಜುಳ, ಆಕಾಶ್.ಎನ್ ಇತರರಿದ್ದರು.
೦೪ ದೇವನಹಳ್ಳಿ ಚಿತ್ರಸುದ್ದಿ: ೦೧ಬಿದಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿದರು.