ಸಾರಾಂಶ
ಕವಿತಾಳ ಸಮೀಪದ ಇರಕಲ್ ಮಠದಲ್ಲಿ ಜಾತ್ರೆ ನಿಮಿತ್ತವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಇರಕಲ್ ಮಠದ ಪೀಠಾಧಿಪತಿ ಬಸವ ಪ್ರಸಾದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.
ಕವಿತಾಳ: ಪ್ರತಿ ರ್ಷದ ಸಂಪ್ರದಾಯದಂತೆ ಈ ವರ್ಷವೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಇರಕಲ್ ಮಠದ ಪೀಠಾಧಿಪತಿ ಬಸವ ಪ್ರಸಾದ ಸ್ವಾಮೀಜಿ ಹೇಳಿದರು.
ಸಮೀಪದ ಇರಕಲ್ ಮಠದಲ್ಲಿ ಜಾತ್ರೆ ನಿಮಿತ್ತವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಪಾರಂಪರಿಕ ವೈದ್ಯರಾದ ವೈದ್ಯಶ್ರೀ ಚಂದ್ರಶೇಖರ ಪಂಡಿತ ಮಾತನಾಡಿ, ಆಯರ್ವೇದ ಮತ್ತು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ರೋಗವನ್ನು ಸಂಪೂರ್ಣ ತೆಗೆದು ಹಾಕಿ ರೋಗ ಮೂಲಕ್ಕೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಪಾರಂಪರಿಕ ವೈದ್ಯರಾದ ಯೋಗಿ ಚಂದ್ರಶೇಖರ ಗುರೂಜಿ, ಪರಶುರಾಮ ಕೊಟ್ಟೂರು, ಕೊಟ್ರಮ್ಮ ಕವಾಡಿ, ಶ್ರೀನಿವಾಸ ಪಂಡಿತ, ಡಿ.ಜಿ. ರವಿಕುಮಾರ, ವೆಂಕಟೇಶ ಮೂಡಲಗುಂಡ, ಶಿವಲೀಲಾ ಬಾಪುಗೌಡ ಪಾಟೀಲ, ದಿನಕರ ಹೊಳಲ್ಕೆರೆ, ಚಂದ್ರಶೇಖರ ಪಂಡಿತ ಮತ್ತಿತರರು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಮೌನೇಶ ಪಾಟೀಲ್ ಸೇರಿ ಇತರರು ಇದ್ದರು.